
ಗುತ್ತಿಗಾರಿನಲ್ಲಿರುವ ಕೆನರಾ ಎಟಿಎಂ ಅವ್ಯವಸ್ಥೆ ಬಗ್ಗೆ ಅಮರ ಸುದ್ದಿಯಲ್ಲಿ ವರದಿ ಪ್ರಕಟಿಸಿದ ಬೆನ್ನಲ್ಲೆ ನೂತನ ಮೆಷಿನ್ ಅಳವಡಿಕೆಯಾಗುತ್ತಿದೆ.
ಗುತ್ತಿಗಾರಿನಲ್ಲಿ ಒಂದೇ ರಾಷ್ಟ್ರೀಕೃತ ಬ್ಯಾಂಕ್,ಒಂದೇ ಎಟಿಎಂ ಇದ್ದು ಉತ್ತಮ ಸೇವೆ ನೀಡುವಲ್ಲಿ ನಿರಂತರ ವಿಫಲವಾಗಿತ್ತು. ಹೆಚ್ಚಿನ ದಿನಗಳಲ್ಲಿ ಎಟಿಎಂ ನೋ ಸರ್ವೀಸ್ ನಲ್ಲಿರುತ್ತದೆ, ನಾಲ್ಕು ಗ್ರಾಮಗಳ ಜನರಿಗೆ ಇರುವುದು ಇದೊಂದೇ ಬ್ಯಾಂಕ್. ಈ ಮೊದಲು ಸಿಂಡಿಕೇಟ್ ಬ್ಯಾಂಕ್ ಆಗಿದ್ದಾಗಲೂ ಉತ್ತಮ ಸೇವೆ ನೀಡದ ಬ್ಯಾಂಕ್ ಕೆನರಾ ಬ್ಯಾಂಕ್ ಆಗಿ ಬದಲಾದರೂ ಗುಣಮಟ್ಟದಲ್ಲಿ ಬದಲಾಗಿಲ್ಲ. ಬ್ಯಾಂಕ್ ಸಿಬ್ಬಂದಿಗಳೂ ಉತ್ತಮ ಸೇವೆ ನೀಡುತ್ತಿಲ್ಲ, ಗ್ರಾಹಕರಿಗೆ ಗೌರವ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ವರದಿ ಪ್ರಕಟಿಸಲಾಗಿತ್ತು. ಎಚ್ಚೆತ್ತ ಬ್ಯಾಂಕ್ ಅಧಿಕಾರಿಗಳು ನೂತನ ಅಳವಡಿಕೆಗೆ ಕ್ರಮ ಕೈಗೊಂಡಿದ್ದು ಗ್ರಾಹಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಹೊಸ ಮೆಷಿನ್ ನಿಂದಾಗಿ ಗ್ರಾಹಕರಿಗೆ ಉತ್ತಮ ಸೇವೆ ಸಿಗುವಂತಾಗಲಿ.
