Ad Widget

ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಬಟ್ಟೋಡಿ ಅವರಿಗೆ ಬೀಳ್ಕೊಡುಗೆ

ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಬಟ್ಟೋಡಿ ಅವರಿಗೆ ಸೇವಾ ನಿವೃತ್ತಿಗೊಂಡ ಹಿನ್ನೆಲೆಯಲ್ಲಿ ಮಾ.31 ರಂದು ಸಂಘದ ಪ್ರಧಾನ ಕಛೇರಿಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು.ಈ ಸಂದರ್ಭದಲ್ಲಿ ಚಂದ್ರಶೇಖರ ಬಟ್ಟೋಡಿ ಅವರಿಗೆ ಶಾಲು ಹೊದಿಸಿ ಸ್ಮರಣಿಕೆ ಹಾಗೂ ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು.ಚಂದ್ರಶೇಖರ ಬಟ್ಟೋಡಿ ರವರ ಪತ್ನಿ ಶ್ರೀಮತಿ ಕಿರಣ, ಪುತ್ರ...

“ಭಾವ ತೀರ ಯಾನ” ಚಲನಚಿತ್ರ ಆರನೇ ವಾರದಲ್ಲಿ ರನ್ನಿಂಗ್ – ಏ.02ರಂದು ಸಂಜೆ 4.30 ಕ್ಕೆ ಶೋ

ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ  ಮಯೂರ ಅಂಬೆಕಲ್ಲು ನಿರ್ಮಾಣದ "ಭಾವ ತೀರ ಯಾನ" ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು 6ನೇ ವಾರದಲ್ಲಿ ಯಶಸ್ವಿಯಾಗಿ ಪುತ್ತೂರಿನ ಭಾರತ್ ಸಿನೇಮಾಸ್ ನಲ್ಲಿ ಪ್ರದರ್ಶನ ಕಾಣುತ್ತಿದೆ. ಏ.02 ರಂದು ಸಂಜೆ 4.30 ಕ್ಕೆ ಚಿತ್ರ ಪ್ರದರ್ಶನಗೊಳ್ಳಲಿದೆ.
Ad Widget

ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಬಟ್ಟೋಡಿ ನಿವೃತ್ತಿ

ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಹಾಯಕ ಕಾರ್ಯನಿರ್ವಹಣಾಧಿಕಾರಿಗಳಾದ ಚಂದ್ರಶೇಖರ ಬಟ್ಟೋಡಿ ರವರು ಮಾ.31 ರಂದು ಸೇವಾ ನಿವೃತ್ತರಾದರು.1987ರಲ್ಲಿ ಗುಮಾಸ್ತರಾಗಿ ಸೇರ್ಪಡೆಯಾದ ಇವರು 2014ರಲ್ಲಿ ಹಿರಿಯ ಗುಮಾಸ್ತರಾಗಿ ಬಡ್ತಿಗೊಂಡು 2022 ರಲ್ಲಿ ಲೆಕ್ಕ ಪಾಲಕರಾಗಿ ಮುಂಬಡ್ತಿಗೊಂಡು ಸಹಕಾರಿ ಸಂಘದ ಕೊಲ್ಲಮೊಗ್ರು ಶಾಖಾ ಬ್ರಾಂಚ್ ಮ್ಯಾನೇಜರ್ ಆಗಿ ನೇಮಕಗೊಂಡರು. ನಂತರ 2023 ರಿಂದ ಸಹಕಾರಿ ಸಂಘದ...

ಮಡಪ್ಪಾಡಿ ಕಾಶಿ ನಡುಬೆಟ್ಟು ಕಡಿದಾದ ದಿಣ್ಣೆ(ಚಡಾವು) ತಗ್ಗಿಸುವ ಕಾರ್ಯಕ್ಕೆ ಗುದ್ದಲಿ ಪೂಜೆ

ಮಡಪ್ಪಾಡಿಯಿಂದ ಕಾಶಿ ನಡುಬೆಟ್ಟು ಮನೆಗಳಿಗೆ ಸಂಪರ್ಕಿಸುವ ರಸ್ತೆಯು ಹಲವು ವರ್ಷಗಳಿಂದ ತೀರ ಹದಗೆಟ್ಟಿದ್ದು, ಆ ರಸ್ತೆಯ ಫಲಾನುಭವಿಗಳ ಬಹು ಬೇಡಿಕೆಗೆ ಸ್ಪಂದಿಸಿ ಮಾನ್ಯ ಶಾಸಕರಿಗೆ ಮಡಪ್ಪಾಡಿ ಗ್ರಾಮ ಸಮಿತಿ ಕಡೆಯಿಂದ ಬಿಜೆಪಿ ಜಿಲ್ಲಾಕಾರ್ಯದರ್ಶಿ ವಿನಯ್ ಕುಮಾರ್ ಮುಳುಗಾಡು ನೇತೃತ್ವದಲ್ಲಿ ಮನವಿ ಸಲ್ಲಿಸಿ ಶಾಸಕರ ವಿಶೇಷ ಅನುದಾನವನ್ನು ತರಿಸಿಕೊಂಡು ಮಡಪ್ಪಾಡಿ - ಕಾಶಿ- ನಡುಬೆಟ್ಟು ರಸ್ತೆಯಲ್ಲಿ ಫಲಾನುಭವಿಗಳ...

ಐನೆಕಿದು : ಮೂರ್ನಾಲ್ಕು ವಾರಗಳಿಂದ ಗ್ರಾಮದಲ್ಲಿ ಬೀಡುಬಿಟ್ಟಿರುವ ಆನೆಗಳು – ನಿರಂತರ ಆನೆ ದಾಳಿಯಿಂದ ನಾಶವಾಗುತ್ತಿರುವ ಕೃಷಿಯನ್ನು ರಕ್ಷಿಸುವಂತೆ ಸಂಬಂಧಪಟ್ಟವರಿಗೆ ಮನವಿ ಮಾಡುತ್ತಿರುವ ಗ್ರಾಮಸ್ಥರು – ಸಮಸ್ಯೆಗೆ ಸ್ಪಂದಿಸದಿದ್ದರೆ ಹೋರಾಟ : ಜಯಪ್ರಕಾಶ್ ಕೂಜುಗೋಡು

ಕಳೆದ ಮೂರ್ನಾಲ್ಕು ವಾರಗಳಿಂದ ಐನೆಕಿದು ಗ್ರಾಮದಲ್ಲಿ ಬೀಡುಬಿಟ್ಟಿರುವ ಆನೆ ದಾಳಿಯಿಂದಾಗಿ ನಾಶವಾಗುತ್ತಿರುವ ಕೃಷಿಯನ್ನು ರಕ್ಷಿಸುವಂತೆ ಸಂಬಂಧಪಟ್ಟವರಿಗೆ ಗ್ರಾಮಸ್ಥರು ಮನವಿ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದ್ದು, ಈ ಬಗ್ಗೆ ಮಾತನಾಡಿದ ಸ್ಥಳೀಯರಾದ ಜಯಪ್ರಕಾಶ್ ಕೂಜುಗೋಡು “ಒಂದು ಕಡೆಯಿಂದ ಕೋತಿ, ಕಡವೆ, ಕಾಟಿ, ಹಂದಿ ಇತ್ಯಾದಿ ಕಾಡು ಪ್ರಾಣಿಗಳು ಮಾಡುವ ದಾಳಿಯಿಂದ ಕೃಷಿ ನಾಶವಾಗುತ್ತಿದ್ದು, ಇನ್ನೊಂದು ಕಡೆಯಿಂದ ಹೊಸ ಹೊಸ...

ಬಾಳಿಲ ವಿದ್ಯಾಬೋಧಿನೀ ವಿದ್ಯಾಸಂಸ್ಥೆಗಳ ನೂತನ ಮುಖ್ಯೋಪಾಧ್ಯಾಯರಾಗಿ ಉದಯಕುಮಾರ್ ರೈ ಎಸ್

ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲಾ ಮುಖ್ಯ ಶಿಕ್ಷಕರಾಗಿದ್ದ ಯಶೋಧರ ಎನ್ ಇವರು ಮಾರ್ಚ್ 31ರಂದು ವಯೋ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ 1 ಏಪ್ರಿಲ್ 2025 ರಿಂದ ಪ್ರೌಢಶಾಲೆಯ ನೂತನ ಮುಖ್ಯಶಿಕ್ಷಕರಾಗಿ ಗಣಿತ-ವಿಜ್ಞಾನ ಸಹಶಿಕ್ಷಕರಾದ ಉದಯಕುಮಾರ್ ರೈ ಎಸ್ ಅಧಿಕಾರ ವಹಿಸಿಕೊಂಡಿದ್ದಾರೆ. 30.03.1998ರಲ್ಲಿ ಶಿಕ್ಷಕರಾಗಿ ಸೇರ್ಪಡೆಗೊಂಡು, 28.07.1998 ರಂದು ಇಲಾಖಾ ಅನುಮೋದನೆಯೊಂದಿಗೆ ಖಾಯಂ ಸಹಶಿಕ್ಷಕರಾಗಿ 27 ವರ್ಷಗಳ ಸೇವಾ...

ಕುಂಬರ್ಚೋಡು ಮೊಹಿಯದ್ದೀನ್ ಜುಮ್ಮಾ ಮಸೀದಿಯಲ್ಲಿ ಸಂಭ್ರಮದ ಈದುಲ್ ಪಿತರ್ ಹಬ್ಬ ಆಚರಣೆ

ಮೊಹಿಯದ್ದೀನ್ ಜುಮ್ಮಾ ಮಸೀದಿಯಲ್ಲಿ ಈದುಲ್ ಫಿತರ್ ಹಬ್ಬವನ್ನು ಆಚರಿಸಲಾಯಿತು. ಮಸೀದಿಯ ಖತಿಬರಾದ ಅಶ್ರಫ್ ಮುಸ್ಲಿಯಾರ್ ರವರು ಕುತುಬಾ ನೆರವೇರಿಸಿ ಈದ್ ಸಂದೇಶವನ್ನು ನೀಡಿ ಮಾತನಾಡಿ ಹಬ್ಬ ಸಂಭ್ರಮದ ಹೆಸರಿನಲ್ಲಿ ಒಂದು ಕ್ಷಣ ಆಚರಿಸುವ ಅನಿಸ್ಲಾಮಿಕ ಕಾರ್ಯಕ್ರಮಗಳು ನಮ್ಮ ಶಾಶ್ವತ ಇಹ ಪರ ನಷ್ಟಕ್ಕೆ ಹೇತು ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ. ಇಸ್ಲಾಮಿನಲ್ಲಿ ಸಂಭ್ರಮಗಳ ಆಚರಣೆಗೂ ಒಂದು...
error: Content is protected !!