Ad Widget

ಮಾ.31 : ಪೆರುವಾಜೆ ಗ್ರಾಮ ಪಂಚಾಯತ್‌ ಪಿಡಿಒ ಜಯಪ್ರಕಾಶ್‌ ಅಲೆಕ್ಕಾಡಿ ನಿವೃತ್ತಿ

. . . . . . . . .

ಪೆರುವಾಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್‌ ಅಲೆಕ್ಕಾಡಿಯವರು ಮಾ.31 ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.

ಸುದೀರ್ಘ 37 ವರ್ಷಗಳ ಕಾಲ ವಿವಿಧ ಗ್ರಾಮ ಪಂಚಾಯತ್ ಗಳಲ್ಲಿ ಸೇವೆ ಸಲ್ಲಿಸಿ ಇವರು ನಿವೃತ್ತಿಗೊಳ್ಳಲಿದ್ದಾರೆ.

ಮುರುಳ್ಯ ಗ್ರಾಮದ ಅಲೆಕ್ಕಾಡಿ ಲಿಂಗಪ್ಪ ಪೂಜಾರಿ ಮತ್ತು ಬಾಲಕ್ಕ ದಂಪತಿಗಳ ಪುತ್ರನಾಗಿ ದಿನಾಂಕ : 04-03-1965 ರಂದು ಜನಿಸಿ, ಪ್ರಾಥಮಿಕ ಶಿಕ್ಷಣವನ್ನು ಸ.ಹಿ.ಪ್ರಾ.ಶಾಲೆ ಅಲೆಕ್ಕಾಡಿಯಲ್ಲಿ, ಪ್ರೌಢ ಶಿಕ್ಷಣವನ್ನು ವಿಧ್ಯಾಬೋಧಿನಿ ಪ್ರೌಢ ಶಾಲೆ ಬಾಳಿಲದಲ್ಲಿ, ಪಿಯುಸಿ ವಿಧ್ಯಾಭ್ಯಾಸವನ್ನು ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ಳಾರೆಯಲ್ಲಿ ಪೂರೈಸಿ, ಸರಕಾರಿ ಡಿಪ್ಲೋಮೋ ಕೋರ್ಸನ್ನು ಮಡಿಕೇರಿಯಲ್ಲಿ ಮಾಡಿ, ಪದವಿ ಶಿಕ್ಷಣವನ್ನು ಮೈಸೂರು ಅಂಚೆ ತೆರಪಿನ ಮೂಲಕ ಪೂರೈಸಿರುತ್ತಾರೆ. ಪ್ರಥಮವಾಗಿ ಸಹಕಾರಿ ಸಂಸ್ಥೆಯಲ್ಲಿ ಸ್ಟೀಲ್ ಕೋಚಿಂಗ್ ಕಂಪೆನಿಯಲ್ಲಿ ದುಡಿದು, ವಯಸ್ಕರ ಶಿಕ್ಷಣ ಶಿಕ್ಷಕರಾಗಿ, ಜನ ಶಿಕ್ಷಣ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ. 30-05-1998ರಂದು ಜಗನ್ನಾಥ ರೈ ಪಿಜಾವುಗುತ್ತು ಎಣ್ಣೂರು ಮಂಡಲ ಪಂಚಾಯತ್ ಪ್ರಧಾನರಾಗಿದ್ದ ಸಂದರ್ಭದಲ್ಲಿ ಇವರನ್ನು ಎಣ್ಣೂರು ಮಂಡಲ ಪಂಚಾಯತ್ ಕಛೇರಿಯಲ್ಲಿ ಗುಮಾಸ್ತರಾಗಿ ಸೇರಿಸಿದರು.

ಅಲ್ಲಿ ಸುಮಾರು 11 ವರ್ಷ ಸುಧೀರ್ಘ ಸೇವೆ ಸಲ್ಲಿಸಿ ನಂತರ ದಿನಾಂಕ 03/-04-1999 ರಂದು ಪುತ್ತೂರು ತಾಲೂಕು ನೂಜಿಬಾಳ್ತಿಲ ಗ್ರಾಮ ಪಂಚಾಯತ್ ನಲ್ಲಿ ಗ್ರೇಡ್-2 ಕಾರ್ಯದರ್ಶಿ ಸರಕಾರಿ ಸೇವೆಗೆ ಸೇರಿದರು.

2007-08ನೇ ಸಾಲಿನಲ್ಲಿ ಸಂಪೂರ್ಣ ನೈರ್ಮಲ್ಯ ಆಂದೋಲನದ ಅಡಿಯಲ್ಲಿ ಸಂಪೂರ್ಣ ಪ್ರಗತಿ ಸಾಧಿಸಿ ರಾಷ್ಟ್ರಪತಿಯವರಿಂದ ನಿರ್ಮಲ ಪುರಸ್ಕಾರ ಪಡೆಯಲು ಶ್ರಮ ವಹಿಸಿದ್ದಾರೆ.

ಸತತ11ವರ್ಷಗಳ ಕಾಲ ಅನುಭವ ಮಾಡಿದ ನಂತರ ಇಲಾಖೆಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 05-07-2013ರಂದು ಗ್ರೇಡ್-1 ಕಾರ್ಯದರ್ಶಿಯಾಗಿ ಮಂಗಳೂರು ತಾಲೂಕು ಉಳಾಯಿಬೆಟ್ಟು ಗ್ರಾಮ ಪಂಚಾಯತ್ ನಲ್ಲಿ ಕರ್ತವ್ಯ ನಿರ್ವಹಿಸಿದರು.

ಅದರ ಜೊತೆಗೆ ಪ್ರಭಾರ ಕಾರ್ಯದರ್ಶಿಯಾಗಿ ಬಿಳಿನೆಲೆ ಗ್ರಾಮ ಪಂಚಾಯತ್ ಕಛೇರಿಯಲ್ಲಿ ಮತ್ತು ಬೆಳಂದೂರು ಗ್ರಾಮ ಪಂಚಾಯತ್ ನಲ್ಲಿ ಕರ್ತವ್ಯ ನಿರ್ವಹಿಸಿರುತ್ತಾರೆ.

ತಾಲೂಕು ಪಂಚಾಯತ್ ಸುಳ್ಯ ಇಲ್ಲಿ ಕೋರ್ಟ್‌ ಹಾಗೂ ಪಂಚಾಯತ್ ಗಳ ಅಂಕಿ ಅಂಶಗಳ ಕ್ರೋಢೀಕರಣದ ಅನುಭವವನ್ನೂ ಪಡೆದ ಇವರು ಚಿತ್ರಕಲೆ ಸಾಹಿತ್ಯ ಯಕ್ಷಗಾನ ತಾಳಮದ್ದಲೆಯಲ್ಲೂ ಆಸಕ್ತಿ ಹೊಂದಿದ್ದರು. ಚೆಸ್‌ ಪಂದ್ಯಾಟದಲ್ಲಿ ಪ್ರಶಸ್ತಿಯನ್ನು ಗಳಿಸಿರುತ್ತಾರೆ.

ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ರಾಜೀವ ಗಾಂಧಿ ಕುಡಿಯುವ ನೀರು ಮತ್ತು ನೈರ್ಮಲೀಕರಣ ಯೋಜನೆ ಹಣಕಾಸು ಮತ್ತು ಲೆಕ್ಕಪತ್ರ ನಿರ್ವಹಣೆ ತರಬೇತಿ ದಕ್ಷಿಣ ಕನ್ನಡ ಏಡ್ಸ್ (ರಿ)ಯ ಸಮಿತಿ ಕಾರ್ಯಕ್ರಮದಲ್ಲಿ ತರಬೇತಿ ಪಡೆದಿರುತ್ತಾರೆ.

ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ಜಕ್ಕೂರು-ಬೆಂಗಳೂರು ಈ ಸಂಸ್ಥೆಯಲ್ಲಿ ಗ್ರಾಮೀಣ ಉಪಯೋಗಕ್ಕೆ ಪುನರ್ ಉತ್ಪಾದಿಸಲ್ಪಡುವ ಇಂಧನ ತರಬೇತಿಯ ಅನುಭವ ಪಡೆದು ಗ್ರೇಡ್-1 ಕಾರ್ಯದರ್ಶಿ ಹುದ್ದೆಯಿಂದ ದಿನಾಂಕ 19-06-2018ರಂದು ಸುಳ್ಯ ತಾಲೂಕು ಪೆರುವಾಜೆ ಗ್ರಾಮ ಪಂಚಾಯತ್ ನಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು.

ತನ್ನ ಸರಕಾರಿ ಸೇವೆಯಲ್ಲಿ ಐ.ಆರ್.ಡಿ.ಪಿ, ಜೆ.ಆ‌ರ್.ವೈ, ನರೇಗಾ ಯೋಜನೆಯನ್ನು ಪ್ರಾಮಾಣಿಕವಾಗಿ ಸರಕಾರದಿಂದ ಬಿಡುಗಡೆಯಾದ ಸೌಲಭ್ಯಗಳನ್ನು ಪ್ರಾಮಾಣಿಕತೆಯಿಂದ ಜನರಿಗೆ ಒದಗಿಸಿಕೊಟ್ಟು 75ನೇ ಸ್ವಾತಂತ್ರೋತ್ಸವ ಆಚರಣೆಯ ಸಂದರ್ಭದಲ್ಲಿ ಪೆರುವಾಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ತಮ್ಮನ್ನು ಸುದ್ದಿ ಬಿಡುಗಡೆ ವಾರಪತ್ರಿಕೆಯ ವತಿಯಿಂದ ಜನಾಭಿಪ್ರಾಯದಂತೆ ಲಂಚ ರಹಿತ ಅಧಿಕಾರಿಯಾಗಿ ಆಯ್ಕೆ ಮಾಡಿ ಸನ್ಮಾನಿಸಿರುತ್ತಾರೆ.

ಇವರ ಧರ್ಮಪತ್ನಿ ಶ್ರೀಮತಿ ಭಾರತಿ ಜಯಪ್ರಕಾಶ್ ಅಲೆಕ್ಕಾಡಿಯವರು ಕಾಣಿಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪೆರುವಾಜೆ ದೇವಸ್ಥಾನದಲ್ಲಿ ಆಡಳಿತಾಧಿಕಾರಿ ಸೇವೆ 2024-25ನೇ ಸಾಲಿನಲ್ಲಿ ಪೆರುವಾಜೆ ಶ್ರೀ ಜಲದುರ್ಗಾ ದೇವಿ ದೇವಸ್ಥಾನದ ಆಡಳಿತ ಅಧಿಕಾರಿಯಾಗಿ ಒಂದು ವರ್ಷ ಸೇವೆ ಸಲ್ಲಿಸಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಹಾಗೂ ವಾರ್ಷಿಕ ಜಾತ್ರೋತ್ಸವವನ್ನು ಜನ ಮೆಚ್ಚುಗೆಯೊಂದಿಗೆ ಯಶಸ್ವಿಯಾಗಿ ಪೂರ್ಣಗೊಳಿಸಿ ಭಕ್ತಾದಿಗಳಿಂದ ಮೆಚ್ಚುಗೆ ಗಳಿಸಿರುತ್ತಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!