
ಬ್ರಿಟಿಷರ ಆಡಳಿತದಲ್ಲಿ ತೊಂದರೆಯಿಂದ ಬೇಸತ್ತ ಕೃಷಿಕರು ರಾಜ ಪ್ರಭುತ್ವ ಪುನರ್ ಸ್ಥಾಪಿಸುವ ಉದ್ದೇಶದಿಂದ ಬಂಡಾಯ ಆರಂಭಿಸಿದರು. ಆ ವೇಳೆ ಜನರ ವಿಸ್ವಾಸಗಳಿಸಿದ್ದ ಕೆದಂಬಾಡಿ ರಾಮಯ್ಯ ಗೌಡರು ನಾಯಕರಾಗಿ ರೂಪುಗೊಂಡರು ಎಂದು ಅರವಿಂದ ಚೊಕ್ಕಾಡಿ ಹೇಳಿದರು.ಅವರು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಅಮೈಮಡಿಯಾರು ಶಾಲೆಯಲ್ಲಿ ನಡೆದ ಸಮರ ವೀರ ಕೆದಂಬಾಡಿ ರಾಮಣ್ಣ ಗೌಡರ ಸ್ಮರಣೆ ಮಾಡುವ ಕಾರ್ಯಕ್ರಮ “ನೆಂಪುನ ಜಂಬರ” ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದರು. ಜನರ ದಂಗೆಯನ್ನು ವ್ಯವಸ್ಥಿತ ಬಂಡಾಯವನ್ನಾಗಿಸಲು ರಾಮಯ್ಯ ಗೌಡರು ಶ್ರಮಿಸಿದ್ದಾರೆ. ಅವರ ಹೋರಾಟವನ್ನು ಇಂದು ನಾವು ಜಾತಿಗೆ ಸೀಮಿತಗೊಳಿಸದೇ ಎಲ್ಲರೂ ಚಿಂತನೆ ಮಾಡುವಂತಾಗಬೇಕಿದೆ ಎಂದರು. ಮಂಗಳೂರಿನ ಬಾವುಟಗುಡ್ಡೆಯಲ್ಲಿ ರಾಮಯ್ಯ ಗೌಡರ ಪ್ರತಿಮೆ ನಿರ್ಮಾಣ ಸಮಿತಿಯ ಸಂಚಾಲಕರಾದ ಕಿರಣ್ ಬುಡ್ಲೆಗುತ್ತು ಮಾತನಾಡಿ “ಹೋರಾಟದಿಂದ ನನ್ನ ಇಡೀ ಕುಟುಂಬವನ್ನೇ ಕಳೆದುಕೊಂಡು ಹುತಾತ್ಮರಾದವರು ರಾಮಯ್ಯ ಗೌಡರು. ಅವರ ನೇತೃತ್ವದಲ್ಲಿ ನಡೆದ ಅಮರ ಸುಳ್ಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಎಲ್ಲಾ ಸಮುದಾಯ ಭಾಗಿಯಾಗಿದೆ. ಈ ಹೋರಾಟ ಇತಿಹಾಸದಲ್ಲಿ ದಾಖಲಾಗಿ ಮುಂದಿನ ಪೀಳಿಗೆಗೆ ನೆನಪಿಸುವ ಕೆಲಸ ಆಗಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಾನಂದ ಮಾವಜಿ ವಹಿಸಿದ್ದರು. ಹಿರಿಯರಾದ ಕೆದಂಬಾಡಿ ವೆಂಕಟ್ರಮಣ ಗೌಡ ಸಭಾಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾ.ಪಂ.ಅಧ್ಯಕ್ಷೆ ಪೂರ್ಣಿಮಾ, ಅಕಾಡೆಮಿಯ ಗೌರವಾಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ , ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್.ಗಂಗಾಧರ, ಜ್ಞಾನಧಾಮ ಚಾರಿಟೇಬಲ್ ಟ್ತಸ್ಡ್ ನ ಸಂಚಾಲಕರಾದ ದಾಮೋದರ ಗೌಡ ಮದುವೆಗದ್ದೆ, ಗ್ರಾ.ಪಂ. ಉಪಾಧ್ಯಕ್ಷೆ ಚಿತ್ರಾ ಪಾಲಡ್ಕ, ಅಕಾಡೆಮಿಯ ಮಾಜಿ ಸದಸ್ಯ ಸುರೇಶ್ ಎಂ.ಎಚ್., ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ವಿದ್ಯಾಧರ ಹರ್ಲಡ್ಕ, ಮುಖ್ಯೋಪಾಧ್ಯಾಯಿನಿ ರಾಮಕ್ಕ , ಮಾಜಿ ಸೈನಿಕ ಅಡ್ಡಂತಡ್ಕ ದೇರಣ್ಣ ಗೌಡ, ನಿರ್ದೇಶಕರಾದ ಲತಾ ಕುದ್ಪಾಜೆ, ಡಾ.ಎನ್.ಎ. ಜ್ಞಾನೇಶ್ , ಲೋಕೇಶ್ ಊರುಬೈಲು ಮತ್ತಿತರರು ಉಪಸ್ಥಿತರಿದ್ದರು.ಅಕಾಡೆಮಿ ಸದಸ್ಯರಾದ ಚಂದ್ರಾವತಿ ಬಡ್ಡಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಚಂದ್ರಶೇಖರ ಪೇರಾಲು ಸ್ವಾಗತಿಸಿದರು. ಸವಿತಾ ಸಂದೇಶ್ ನಡುಮುಟ್ಲು ಪ್ರಾರ್ಥಿಸಿದರು. ನೆಹರು ಮೆಮೋರಿಯಲ್ ಕಾಲೇಜು ಉಪನ್ಯಾಸಕಿ ಬೇಬಿ ವಿದ್ಯಾ ಪಿ. ನಿರೂಪಿಸಿದರು.