
ಸುಳ್ಯ ತಾಲೂಕು ಮುಪ್ಪೇರ್ಯ ಗ್ರಾಮದ ಮೂಲೆಮಜಲು ದೋಳ ಗರಡಿಯಲ್ಲಿ ಕಾಲಾವಧಿ ನಡೆಯುವ ಶ್ರೀ ಬ್ರಹ್ಮ ಬೈದರ್ಕಳ ನೇಮ ಏ.4 ಶುಕ್ರವಾರದಂದು ನಡೆಯಲಿದೆ. ಆ ದಿನ ಬೆಳಿಗ್ಗೆ 6.00ಕ್ಕೆ ಕೊಡಮಂತಾಯ ದೈವಕ್ಕೆ ನೇಮ, ಪೂ. 10.00ಕ್ಕೆ ಬ್ರಹ್ಮರ ಉತ್ಸವ,ಸಂಜೆ 4.00ಕ್ಕೆ ಬೈದರ್ಕಳ ಭಂಡಾರ ತೆಗೆಯುವುದು,ಸಂಜೆ 7.30ಕ್ಕೆ ಭಜನಾ ಕಾರ್ಯಕ್ರಮ,ರಾತ್ರಿ 9.00ಕ್ಕೆ ಅನ್ನ ಸಂತರ್ಪಣೆ,ರಾತ್ರಿ 10.00ಕ್ಕೆ ಬ್ರಹ್ಮ ಬೈದರ್ಕಳ ಗರಡಿ ಇಳಿಯುವುದು,ರಾತ್ರಿ 1.00ಕ್ಕೆ ಮಾನಿ ಬಾಲೆ ಗರಡಿ ಇಳಿಯುವುದು ಮರುದಿನ ಬೆಳಿಗ್ಗೆ ಬೆಳಿಗ್ಗೆ 5.00ಕ್ಕೆ ಕೋಟಿ-ಚೆನ್ನಯರ ದರ್ಶನ (ಸೇಟು),ಬೆಳಿಗ್ಗೆ 6.00ಕ್ಕೆ ಗಂಧ ಪ್ರಸಾದ ವಿತರಣೆ ನಡೆಯಲಿದೆ. ಎಂದು ಗರಡಿ ಯ ಆಡಳಿತ ಮೊಕ್ತೇಸರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.