
ಚೇರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯಗುರು ಒಗ್ಗು ಬಿಳಿನೆಲೆಯ ದಮಯಂತಿ ಅವರು ಮಾ.31ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಸುಮಾರು 30 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ದಮಯಂತಿ ಜಿ ಅವರು 1994 ಸೆಪ್ಟೆಂಬರ್ ನಲ್ಲಿ ತನ್ನ ಶಿಕ್ಷಣ ವೃತ್ತಿಯನ್ನು ಆರಂಭಿಸಿ, ವಿದ್ಯಾಬೋಧಿನಿ ಹಿರಿಯ ಪ್ರಾಥಮಿಕ ಶಾಲೆ ಬಾಳಿಲ, ಸ. ಹಿ.ಪ್ರಾ. ಶಾಲೆ ಸುರಂಬೈಲು, ಸ. ಹಿ. ಪ್ರಾ. ಶಾಲೆ ಪುತ್ತಿಲ ಬೈಲಡ್ಕ, ಸ. ಹಿ. ಪ್ರಾ. ಶಾಲೆ ಬಿಳಿನೆಲೆ ಬೈಲು ಇಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ಪ್ರಸ್ತುತ ಚೇರು ಸ.ಕಿ.ಪ್ರಾ. ಶಾಲೆಯಲ್ಲಿ ಪ್ರಭಾರ ಮುಖ್ಯಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.