
ಮಗುವಿಗೆ ಗುರುತಿಸಿ ಕಲಿಯಲು ಸಹಕಾರಿಯಾಗುವ ಮೊಂಟೆಸ್ಸರಿ ಕಲಿಕಾ ಪದ್ಧತಿಯಲ್ಲಿ ಶಿಕ್ಷಕಿಯರನ್ನು ರೂಪಿಸುತ್ತಿರುವ ಬೆಳ್ಳಾರೆಯ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಯಲ್ಲಿ 2024-25ನೇ ಸಾಲಿನ ಪ್ರದರ್ಶನ ತರಗತಿ ನಡೆಯಿತು. ಪ್ರದರ್ಶನ ತರಗತಿಯಲ್ಲಿ ವಿದ್ಯಾರ್ಥಿ ಶಿಕ್ಷಕಿಯರುಗಳೇ ರಚಿಸಿದ ವಿವಿಧ ರೀತಿಯ ಅಧ್ಯಯನ ಮಾದರಿಗಳು ಹಾಗೂ ತಾವೇ ಸಂಗ್ರಹಿಸಿ ಪ್ರದರ್ಶಿಸಿದ ಅಪರೂಪದ ಹಳೆಯ ಕಾಲದ ಪಾರಂಪರಿಕ ವಸ್ತುಗಳು ಗಮನ ಸೆಳೆಯಿತು.
ಭಾರತ್ ಸೇವಕ್ ಸಮಾಜದ ಜಿಲ್ಲಾ ಸಂಯೋಜಕ ರಘುಕುಮಾರ್ ಪ್ರದರ್ಶನ ತರಗತಿ ಉದ್ಘಾಟಿಸಿ ಶುಭಹಾರೈಸಿದರು. ಮೌಲ್ಯಮಾಪಕರಾಗಿ ಉಪ್ಪಳದ ನ್ಯೂ ಭಾರತ್ ಕಾಲೇಜಿನ ಶಿಕ್ಷಕಿ ಶೃತಿ, ಮತ್ತು ಸಂಜೀವ ಕೆ. ಬಿ ಸಹಕರಿಸಿದರು.ವರ್ಲ್ಡ್ ಸ್ಕಿಲ್ ಕೌನ್ಸಿಲ್ ನಿಂದ ಮಾನ್ಯತೆ ಪಡೆದಿರುವ ಭಾರತ್ ಸೇವಕ್ ಸಮಾಜದ ಅಂಗಿಕೃತ ಸಂಸ್ಥೆಯಾದ ಬೆಳ್ಳಾರೆಯ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಯು ಕಳೆದ 8 ವರ್ಷಗಳಿಂದ ವಿಭಿನ್ನ ರೀತಿಯಲ್ಲಿ ಶಿಕ್ಷಕಿಯರ ತರಬೇತಿಯ ಪ್ರದರ್ಶನ ತರಗತಿ ನಡೆಸುತ್ತಿದೆ. ತರಬೇತಿ ಸಮಯದಲ್ಲಿ ವಿವಿಧ ಕೌಶಲ್ಯ ತರಬೇತಿಗಳನ್ನು ನೀಡುವುದರ ಜೊತೆಗೆ ವಿವಿಧ ಸಾಮಾಜಿಕ ಚಟುವಟಿಗಳಲ್ಲೂ ತೊಡಗಿಸಿಕೊಳ್ಳಲಾಗುತ್ತಿದೆ. ಇಲ್ಲಿ ತರಬೇತು ಪಡೆದದವರು ವಿದೇಶಗಳಲ್ಲೂ ಶಿಕ್ಷಕಿಯರಾಗಿ ವೃತ್ತಿ ಬದುಕು ರೂಪಿಸಿಕೊಂಡಿದ್ದಾರೆ. 2025-26ನೇ ಸಾಲಿನ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿಗೆ ದಾಖಲಾತಿ ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ತರಬೇತಿಯಲ್ಲಿ ಮಕ್ಕಳ ಮಾನಸಿಕ ಬೆಳವಣಿಗೆ, ಪೂರ್ವ ಪ್ರಾಥಮಿಕ ಶಿಕ್ಷಣ, ಇಂಗ್ಲೀಷ್ ಸಂವಹನ ಕೌಶಲ್ಯ, ಅರ್ಟ್ ಮತ್ತು ಕ್ರಾಫ್ಟ್ ಶಿಕ್ಷಣ, ಬರವಣಿಗಾ ಕೌಶಲ್ಯ ಮುಂತಾದ ವಿಷಯಗಳ ಕುರಿತು ನುರಿತ ಅಧ್ಯಾಪಕರಿಂದ ಪ್ರಾಯೋಗಿಕ ಮತ್ತು ಸೈದ್ಧಾಂತಿಕ ತರಗತಿಗಳು ನಡೆಯಲಿದೆ. ಈ ತರಬೇತಿಯನ್ನು ಪಿಯುಸಿ ನಂತರದ ವಿದ್ಯಾಭ್ಯಾಸ ಹೊಂದಿದ ಆಸಕ್ತ ಯುವತಿಯರು ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಬೆಳ್ಳಾರೆಯ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.