
ಚೆನ್ನಕೇಶವ ದೇವಸ್ಥಾನ ದ ಬಳಿಯಲ್ಲಿ ಎಳನೀರು ತುಂಬಿಕೊಂಡು ಹೋಗುತಿದ್ದ ಪಿಕಪ್ ವಾಹನ (KA 12B9634) ಬ್ರೇಕ್ ವೈಫಲ್ಯ ಗೊಂಡು ಸಮೀಪದ ಗ್ಯಾರೇಜ್ ಗೆ ನುಗ್ಗಿದ ಘಟನೆ ಇದೀಗ ನಡೆದಿದೆ.
ಪಿಕಪ್ ವಾಹನದ ಬ್ರೇಕ್ ವೈಫಲ್ಯ ಗೊಂಡಿದ್ದು ತಿಳಿದು ಚಾಲಕ ಸಮೀಪದ ಗ್ಯಾರೇಜ್ ಕಡೆಗೆ ತಿರುಗಿಸಿದ್ದ್ದು ಆದರೂ ಚಾಲಕ ಹಾಂಡ್ ಬ್ರೇಕ್ ಹಾಕಿದರು ನಿಯತ್ರಣಕ್ಕೆ ಸಿಗದೇ ವಾಹನ ಮುಂದು ವರೆದು ಗ್ಯಾರೇಜ್ ಒಳಗೆ ನುಗ್ಗಿದೆ.

ಗ್ಯಾರೇಜ್ ನಲ್ಲಿ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದು ವಾಹನ ಬರುದು ನೋಡಿ ತಪ್ಪಿಸಿಕೊಂಡಿದ್ದಾರೆ ಸಮೀಪದಲ್ಲೇ ಭಾವಿ ಇದ್ದು ಪಿಕಪ್ ಅದರ ಸಮೀಪ ಹೋಗಿ ನಿಂತಿದೆ ಸಂಭಾವ್ಯ ಭಾರಿ ಅಪಾಯ ತಪ್ಪಿದೆ