
ಸುಬ್ರಹ್ಮಣ್ಯ ಮಾ.29: ಬಳ್ಪ ಗ್ರಾಮದ ಎಣ್ಣೆಮಜಲು ದಿ.ಮರಿಯಪ್ಪ ಗೌಡರ ಧರ್ಮಪತ್ನಿ ಕಿನ್ನಿಕುಮೇರಿ ಶೇಷಮ್ಮ(92) ಶುಕ್ರವಾರ ದೈವಾಧೀನರಾಗಿರುತ್ತಾರೆ.
ಮೃತರು ಪುತ್ರರಿಗೆ 6 ಜನ ಪುತ್ರರು ಹಾಗೂ ಒಬ್ಬ ಪುತ್ರಿ. ಬೆಂಗಳೂರಿನಲ್ಲಿ ಹೈಕೋರ್ಟ್ ವಕೀಲರಾಗಿರುವ ಧರ್ಮಪಾಲ ಎಣ್ಣೆಮಜಲು, ಸುಳ್ಯ ತಾಲೂಕು ಫೋಟೋಗ್ರಾಫರ್ ಅಸೋಸಿಯೇಷನ್ ಅಧ್ಯಕ್ಷ ಕರುಣಾಕರ ಎಣ್ಣೆಮಜಲು, ರೊಟೇರಿಯನ್ ಮೋಹನ್ ದಾಸ್ ಎಣ್ಣೆಮಜಲು, ಕೃಷಿಕ ನೇಮಿಚಂದ್ರ, ರೂಪಾ ಮನೋಹರ ನಾಳ, ಹಾಗೂ ಬೆಂಗಳೂರಿನ ಉದ್ಯಮಿ ವಿಶ್ವನಾಥ ಹಾಗೂ ಕುಟುಂಬಸ್ಥರು ಬಂಧು-ಮಿತ್ರರನ್ನು ಅಗಲಿರುತ್ತಾರೆ.