
ಜಾಲ್ಸೂರು ಗ್ರಾಮದ ಪಂಚಾಯತ್ ಉಪಾಧ್ಯಕ್ಷರಾಗಿರುವ ತಿರುಮಲೇಶ್ವರಿ ಅರ್ಭಡ್ಕರ ವಿರುದ್ಧ ಅವಿಶ್ವಾಸ ಗೊತ್ತುವಳಿ ಸಭೆ ಇಂದು ಗ್ರಾ.ಪಂ.ಸಭಾಭವನದಲ್ಲಿ ನಡೆಯಲಿತ್ತು. ಆದರೇ ಅವಿಶ್ವಾಸ ಗೊತ್ತುವಳಿಗೆ ಸಹಿ ಹಾಕಿದ ಆರು ಮಂದಿ ಸದಸ್ಯರು ಸಭೆಗೆ ಹಾಜರಾಗದೇ ಕೋರಂ ಇಲ್ಲದೇ ಅವಿಶ್ವಾಸ ರದ್ದಾಗಿ ತಿರುಮೇಶ್ವರಿ ಅರ್ಭಡ್ಕ ಉಪಾಧ್ಯಕ್ಷರಾಗಿ ಮುಂದುವರೆದಿದ್ದಾರೆ.
ಒಟ್ಟು 17 ಮಂದಿ ಪಂಚಾಯತ್ ಸದಸ್ಯರಲ್ಲಿ 12 ಮಂದಿ ಸದಸ್ಯರು ಸಭೆಗೆ ಹಾಜರಾಗಬೇಕಿತ್ತು. ಆದರೇ 7 ಮಂದಿ ಮಾತ್ರ ಸಭೆಗೆ ಬಂದಿದ್ದರು. ಅವಿಶ್ವಾಸಕ್ಕೆ ಸಹಿ ಹಾಕಿದ 6 ಮಂದಿ ಸೇರಿದಂತೆ 10 ಮಂದಿ ಸಭೆಗೆ ಬಂದಿರಲಿಲ್ಲ. ಕೋರಂ ಕೊರತೆಯ ಹಿನ್ನಲೆಯಲ್ಲಿ ಸಭೆ ರದ್ದಾಗಿ ತಿರುಮೇಶ್ವರಿಯವರ ಉಪಾಧ್ಯಕ್ಷತೆ ಸ್ಥಾನ ಉಳಿಸಿಕೊಂಡರು.