
ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯವನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿಯಾದ ಸುಬ್ರಹ್ಮಣ್ಯ – ಮಂಜೇಶ್ವರ ರಸ್ತೆಯ ಬಳ್ಪ ಸಮೀಪ 75ಲಕ್ಷ ವೆಚ್ಚದಲ್ಲಿ 1 ಕಿ.ಮೀ. ರಸ್ತೆ ಮರುಡಾಮರಿಕರಣಕ್ಕೆ ಬಳ್ಪದ ಬೊಗಯ್ಯನ ಕೆರೆಯ ಬಳಿ ಗುದ್ದಲಿಪೂಜೆಯನ್ನು ಶಾಸಕಿ ಭಾಗೀರಥಿ ಮುರುಳ್ಯ ನೆರವೇರಿಸಿದರು.
ಈ ಸಂದರ್ಭದಲ್ಲಿ ಬಳ್ಪ ಗ್ರಾಮ ಪಂಚಾಯತಿ ಅಧ್ಯಕ್ಷ ಹರ್ಷಿತ್ ಕಾರ್ಜ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಪಕ್ಷದ ಪ್ರಮುಖರಾದ
ಸುಬ್ರಹ್ಮಣ್ಯ ಕುಳ, ವೆಂಕಟ್ ದಂಬೆಕೊಡಿ, ರಮಾನಂದ ಎಣ್ಣೆಮಜಲು, ದೇವಿಪ್ರಸಾದ್ ಚಿಕ್ಮುಳಿ, ರವಿ ನರಿಯಾಂಗ,ರಾಜು ಕಣ್ಕಲ್ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.