
ಕೊಲ್ಲಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಗುದ್ದಲಿಪೂಜೆ ಹಾಗೂ ಉದ್ಘಾಟನಾ ಕಾರ್ಯಕ್ರಮವು ಮಾ.27 ರಂದು ನಡೆಯಿತು.
ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು| ಭಾಗೀರಥಿ ಮುರುಳ್ಯ ರವರು ಗುದ್ದಲಿಪೂಜೆ ಹಾಗೂ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿದರು.
ಕೊಲ್ಲಮೊಗ್ರು ಪೇಟೆಯ ಆಲದ ಮರದ ಬಳಿಯ ಹೊಳೆಗೆ 1 ಕೋಟಿ ರೂಪಾಯಿ ವೆಚ್ಚದ ಸೇತುವೆ, ಗಡಿಕಲ್ಲು ರಸ್ತೆ ಬದಿ 25 ಲಕ್ಷ ರೂಪಾಯಿ ವೆಚ್ಚದ ತಡೆಗೋಡೆ, ಕೊಲ್ಲಮೊಗ್ರು ಕುಂಟುಕಾಪು ರಸ್ತೆಗೆ 10 ಲಕ್ಷ ರೂಪಾಯಿ ವೆಚ್ಚದ ಕಾಂಕ್ರೀಟ್, ಕೊಲ್ಲಮೊಗ್ರು-ಮಲ್ಲಾಜೆ-ಕೊಳೆಕ್ಕಾನ ರಸ್ತೆಗೆ 20 ಲಕ್ಷ ರೂಪಾಯಿ ವೆಚ್ಚದ ಕಾಂಕ್ರೀಟ್, ಬೆಂಡೋಡಿಯಲ್ಲಿ 20 ಲಕ್ಷ ರೂಪಾಯಿ ವೆಚ್ಚದ ನೂತನ ಅಂಗನವಾಡಿ ಕಟ್ಟಡ ಇವುಗಳಿಗೆ ಶಂಕುಸ್ಥಾಪನೆ ನೆರವೇರಿತು.
ಅದರೊಂದಿಗೆ ಬೆಂಡೋಡಿ ಶಾಲೆಯಲ್ಲಿ ಎಂ.ಆರ್.ಪಿ.ಎಲ್ ನವರಿಂದ ಕೊಡಲ್ಪಟ್ಟ 7 ಲಕ್ಷ ರೂಪಾಯಿ ವೆಚ್ಚದ ಶೌಚಾಲಯ ಹಾಗೂ ಬೆಂಡೋಡಿ ಬಳಿಯಲ್ಲಿ 5 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಸಾರ್ವಜನಿಕ ಶೌಚಾಲಯಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮೋಹಿನಿ ಕಟ್ಟ, ಉಪಾಧ್ಯಕ್ಷರಾದ ಮಾಧವ ಚಾಂತಾಳ, ಸದಸ್ಯರಾದ ಅಶ್ವಥ್ ಯಳದಾಳು, ಪುಷ್ಪರಾಜ್ ಪಡ್ಪು, ಬಾಲಸುಬ್ರಮಣ್ಯ ಭಟ್, ಜಯಶ್ರೀ ಚಾಂತಾಳ ಹಾಗೂ ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷರಾದ ವೆಂಕಟ್ ವಳಲಂಬೆ, ಮುಳಿಯ ಕೇಶವ ಭಟ್, ಕೃಷ್ಣಯ್ಯ ಮೂಲೆತೋಟ, ಹರೀಶ್ ಕಂಜಿಪಿಲಿ, ಗಣೇಶ್ ಭಟ್ ಇಡ್ಯಡ್ಕ, ಡ್ಯಾನಿ ಯಳದಾಳು, ಕಮಲಾಕ್ಷ ಮುಳ್ಳುಬಾಗಿಲು, ಹೂವಪ್ಪ ಸಂಪ್ಯಾಡಿ, ಹರೀಶ್ ಬಳ್ಳಡ್ಕ, ಜಯರಾಮ್ ಗೋಳ್ಯಾಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.