
ಎಲಿಮಲೆ ಅರಂತೋಡು ರಸ್ತೆಯಲ್ಲಿ ಪಿಂಡಿಮನೆಯಲ್ಲಿ ಅಧಿಕ ಬಾರ ಹೊತ್ತು ಸಾಗುತ್ತಿದ್ದ ಲಾರಿ ಪಿಂಡಿಮನೆ ಎಂಬಲ್ಲಿ ಹೂತು ಹೋದ ಘಟನೆ ಮಾ.27 ರಂದು ನಡೆದಿದೆ. ಇದರಲ್ಲಿ 3 ಯೂನಿಟ್ ಗಿಂತ ಜಾಸ್ತಿ ಜಲ್ಲಿ ಸಾಗಾಟ ಮಾಡುತ್ತಿದ್ದರೆನ್ನಲಾಗಿದೆ. ಈ ರಸ್ತೆಯಲ್ಲಿ ಮಿತಿಗಿಂತ ಹೆಚ್ಚಿನ ಭಾರದ ವಾಹನಗಳು ಸಾಗುತ್ತಿದ್ದು ರಸ್ತೆಗೆ ಹಾನಿಯಾಗುತ್ತಿರುವುದರಿಂದ ಮಿತಿಗಿಂತ ಹೆಚ್ಚಿನ ಭಾರ ಹೊತ್ತು ಸಾಗುವ ವಾಹನಗಳಿಗೆ ನಿಷೇದ ಮಾಡಬೇಕೆಂದು ಎಂದು ಸಾರ್ವಜನಿಕರು ಪಿಡಬ್ಲ್ಯೂಡಿ ಇಲಾಖೆಗೆ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಜನ ಹೋರಾಟಕ್ಕಿಳಿಯುವ ಮುನ್ನ ಇಲಾಖೆಗಳು ಎಚ್ಚೆತ್ತು ಕಾನೂನು ಪಾಲನೆ ಮಾಡುವ ಅಗತ್ಯವಿದೆ.