
ಸುಳ್ಯದ ಚಂದನ ಸಾಹಿತ್ಯ ವೇದಿಕೆ ಮತ್ತು ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗ ಸುಳ್ಯ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ಕವಿ, ಸಾಹಿತಿ, ಗಾಯಕ, ಜ್ಯೋತಿಷಿಯಾದ ಎಚ್ ಭೀಮರಾವ್ ವಾಷ್ಠರ್ ರವರ 49 ನೇ ಹುಟ್ಟುಹಬ್ಬದ ಆಚರಣೆ ಸಂಭ್ರಮ ಪ್ರಯುಕ್ತ, ರಾಜ್ಯಮಟ್ಟಟದ ಚುಟುಕು ಕವಿಗೋಷ್ಠಿ – ಎರಡು ಸಾಹಿತ್ಯ ಕೃತಿಗಳ ಬಿಡುಗಡೆ – ಪ್ರಶಸ್ತಿ ಪ್ರದಾನ – ಸಾಂಸ್ಕೃತಿಕ ಸಮಾರಂಭ- 2025 ಕಾರ್ಯಕ್ರಮವು ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಮಾರ್ಚ್ 23 ರಂದು ಅದ್ದೂರಿಯಾಗಿ ಅರ್ಥಪೂರ್ಣವಾಗಿ ಜರುಗಿತು. ಸಮಾರಂಭದ ಸಭಾಧ್ಯಕ್ಷತೆಯನ್ನು ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಎಚ್. ಭೀಮರಾವ್ ವಾಷ್ಠರ್ ಅವರು ವಹಿಸಿದ್ದರು. ಸುಳ್ಯದ ಶ್ರೀ ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿ ಯವರ ಘನ ಉಪಸ್ಥಿತಿಯಲ್ಲಿ ನಡೆದ ಈ ಸಮಾರಂಭದ ಉದ್ಘಾಟನೆಯನ್ನು ನಿವೃತ್ತ ತಾಂತ್ರಿಕ ಕೃಷಿ ಅಧಿಕಾರಿ ಶ್ರೀ ಮೋಹನ್ ನಂಗಾರು ನೆರವೇರಿಸಿದರು. ರಾಯಚೂರು ಜಿಲ್ಲೆ, ಮಾನ್ವಿ ತಾಲೂಕಿನ ದಿವಂಗತ ಮಹಾಂತಪ್ಪ ಮೇಟಿ ಅವರ ಸಂಸ್ಮರಣೆ ಪ್ರಯುಕ್ತ ಹಿರಿಯ ಸಾಹಿತಿಗಳಾದ ಶ್ರೀ ಪಿ. ವೆಂಕಟೇಶ್ ಬಾಗಲವಾಡ ಆವರಿಗೆ ಚಂದನ ಸದ್ಭಾವನಾ ರತ್ನ ರಾಜ್ಯ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.ಇತ್ತೀಚಿಗೆ ನಿಧನರಾದ ದಿವಂಗತ ಶ್ರೀ ಶಂಕರ ಕುಲಾಲ್ ಪರ್ಕಳ ಅವರ ಸಂಸ್ಮರಣೆ ಪ್ರಯುಕ್ತ ಹಿರಿಯ ಸಾಹಿತಿಗಳಾದ ಶ್ರೀ ನಾರಾಯಣ ರೈ ಕುಕ್ಕುವಳ್ಳಿ ಪುತ್ತೂರು ಅವರಿಗೆ ಚಂದನ ಸದ್ಭಾವನಾ ರತ್ನ ರಾಜ್ಯ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಶಿಕ್ಷಕಿ ಶ್ರೀಮತಿ ಚಂದ್ರಕಲಾ ಡಿ ಮತ್ತು ಶ್ರೀ ಮೋಹನ್ ನಂಗಾರು ಅವರಿಗೆ 25 ವರ್ಷಗಳ ಸುಖಿ ಜೀವನ ನಡೆಸಿದ ದಂಪತಿಗಳಿಗೆ 25 ನೇ ವರ್ಷದ ವಿವಾಹ ವಾರ್ಷಿಕೋತ್ಸವಕ್ಕಾಗಿ ಚಂದನ ಆದರ್ಶ ದಂಪತಿಗಳು ಪ್ರಶಸ್ತಿ ನೀಡಿ ಸಮ್ಮಾನಿಸಲಾಯಿತು. ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮಿಜಿಯವರ 218 ನೇ ಕೃತಿ ಪರಮಾತ್ಮ ಪ್ರೇಮ ಸ್ವರೂಪಿ ಮತ್ತು 219 ನೇ ಕೃತಿ ಮಾಡಿದ್ದುಣ್ಣೋ ಮಹಾರಾಯ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ಸಾಹಿತಿ ವಿರಾಜ್ ಅಡೂರು ಮತ್ತು ಪ್ರಿಯಾ ಸುಳ್ಯ ಹಾಗೂ ಪ್ರಣವಿ ಮುಡೂರು ಅವರಿಗೆ 2025 ನೇ ಸಾಲಿನ ಚಂದನ ಸಾಹಿತ್ಯ ರತ್ನ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಅಭಿನಯ ಕಲೆಯಲ್ಲಿ ಸಾಧನೆ ಮಾಡಿದ ಮಿಥುನ್ ಕುಮಾರ್ ಸೋನಾ ಅವರಿಗೆ ಚಂದನ ಪ್ರತಿಭಾ ರತ್ನ ಪ್ರಶಸ್ತಿ ಮತ್ತು ಪುಷ್ಪಾವತಿ ಡಿ ಎಡಮಂಗಲ ಅವರಿಗೆ ಸಂಗೀತ ಕ್ಷೇತ್ರದ ಸಾಧನೆಯನ್ನು ಪರಿಗಣಿಸಿ ಚಂದನ ಸಂಗೀತ ರತ್ನ ಪ್ರಶಸ್ತಿ ನೀಡಿ ಸನ್ಮಾನ ಮಾಡಲಾಯಿತು. ಗಣ್ಯರು ಹಾಗೂ ಕವಿಗಳು ಸೇರಿ ಕವಿ ಸಾಹಿತಿ ಎಚ್. ಭೀಮರಾವ್ ವಾಷ್ಠರ್ ಅವರ 49 ನೇ ಜನ್ಮದಿನಕ್ಕೆ 49 ಹಣತೆಗಳನ್ನು ಬೆಳಗಿಸಿದರು. ಸಿಹಿ ಹಂಚಿ ಸಂಭ್ರಮಿಸಲಾಯಿತು. ಕೃಷಿ ಕ್ಷೇತ್ರ ಸಾಧಕರಾದ ನವೀನ್, ಸುಳ್ಯ ತಾಲೂಕು ಸಂಧ್ಯಾ ಚೇತನ ಹಿರಿಯ ನಾಗರಿಕರ ಸಂಘ ಇದರ ಕಾರ್ಯದರ್ಶಿ ಶ್ರೀ ಚೆನ್ನಕೇಶವ ಜಾಲ್ಸೂರು ಆವರು ಮುಖ್ಯ ಅತಿಥಿಗಳಾಗಿದ್ದರು.ಹಿರಿಯ ಸಾಹಿತಿ ಶ್ರೀ ಪಿ ವೆಂಕಟೇಶ ಬಾಗಲವಾಡ ಅವರ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ಚುಟುಕು ಕವಿಗೋಷ್ಠಿ ಕಾರ್ಯಕ್ರಮ ನಡೆಯಿತು. ರಾಜ್ಯದೆಲ್ಲೆಡೆಯಿಂದ ಅಗಮಿಸಿದ 30 ಕ್ಕೂ ಅಧಿಕ ಜನ ಕವಿಗಳು ತಮ್ಮ ಸ್ವರಚಿತ ಚುಟುಕು ಕವನಗಳನ್ನು ವಾಚನ ಮಾಡಿದರು. ಕವನ ವಾಚನ ಮಾಡಿದ ಎಲ್ಲಾ ಕವಿಗಳಿಗೂ ಶಾಲು ಹೊದಿಸಿ ಕನ್ನಡ ಶಾಲು ಹಾಕಿ ಪ್ರಮಾಣ ಪತ್ರ ನೀಡಿ ಸಮ್ಮಾನಿಸಲಾಯಿತು. ಸಾಂಸ್ಕೃತಿಕ ಸಮಾರಂಭದಲ್ಲಿ ನೃತ್ಯ, ಗಾಯನ ಕಾರ್ಯಕ್ರಮ ನೀಡಿದ 15 ಕಲಾವಿದರಿಗೂ ಶಾಲು ಹೊದಿಸಿ ಕನ್ನಡ ಶಾಲು ಹಾಕಿ ಪ್ರಮಾಣ ಪತ್ರ ನೀಡಿ ಸಮ್ಮಾನಿಸಲಾಯಿತು. ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ ಸಾಹಿತಿ ಶ್ರೀ ಎಚ್. ಭೀಮರಾವ್ ವಾಷ್ಠರ್ ಅವರನ್ನು ರಾಯಚೂರು ಜಿಲ್ಲೆಯ ಸಾಹಿತಿ ಪಿ. ವೆಂಕಟೇಶ್ ಬಾಗಲವಾಡರವರು ಸನ್ಮಾನಿಸಿದರು. ಸಾಯಿ ಹೇಮಂತ್, ಸಾಯಿ ಪ್ರಶಾಂತ್ ರವರು ಪ್ರಾರ್ಥನೆ ಹಾಡಿದರು. ಖ್ಯಾತ ಕವಿ ಅನಾರ್ಕಲಿ ಸಲೀಂ ಆವರು ಗಣ್ಯರನ್ನು ಸ್ವಾಗತಿಸಿದರು. ಅರುಣ್ ಜಾಧವ ಮತ್ತು ಅಶೋಕ ಕುರುಜಿಗುಡ್ಡೆ ಆವರು ಸಹಕರಿಸಿದರು. ಚಂದನ ಸಾಹಿತ್ಯ ವೇದಿಕೆಯ ಕಾರ್ಯದರ್ಶಿ ಸುಮಂಗಲ ಲಕ್ಷ್ಮಣ್ ಕೋಳಿವಾಡ ಆವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಕವಯಿತ್ರಿ ಪ್ರಿಯಾ ಸುಳ್ಯ ಆವರು ವಂದನಾರ್ಪಣೆ ಮಾಡಿದರು.