
ದಿನಾಂಕ 27/03/2025ರಂದು ಕೋಟೆ ಫೌಂಡೇಶನ್ ವತಿಯಿಂದ ಮಾದರಿ ಶಾಲೆ, ಸುಳ್ಯದಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ವಿತರಣೆ ಹಾಗೂ ಎರಡು ಸ್ಮಾರ್ಟ್ ಟಿವಿ ಯನ್ನು ಕೊಡುಗೆಯಾಗಿ ನೀಡಿದರು.

ಈ ಸಂದರ್ಭದಲ್ಲಿ ಕೋಟೆ ಫೌಂಡೇಶನ್ ನಿರ್ದೇಶಕರಾದ ಶ್ರೀ ರಮೇಶ್, ಹಾಗೂ ಸದಸ್ಯರಾದ ಜಯಂತ ವೆಂಕಟರಾಜ್, ಸುಳ್ಯದ ಸಂಯೋಜಕರಾದ ಶ್ರೀಯುತ ಪ್ರದೀಪ್ ಉಬರಡ್ಕ, ನಗರ ಪಂಚಾಯತ್ ಸದಸ್ಯರಾದ ಶ್ರೀಮತಿ ಕಿಶೋರಿ ಶೇಟ್, ಸುಳ್ಯ ಮಾದರಿ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಎಂ ಬಿ ಸದಾಶಿವ , ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಮಮತಾ, ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ರವಿರಾಜ ಅಡ್ಕಾರ್,ಮುಖ್ಯ ಶಿಕ್ಷಕರಾದ ಶ್ರೀಮತಿ ಸುನಂದಾ ರವರು ವೇದಿಕೆ ಯಲ್ಲಿ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕರಾದ ಸುನಂದಾ ರವರು ಸ್ವಾಗತಿಸಿ, ಶಿಕ್ಷಕಿ ಪ್ರೇಮಾವತಿ ವಂದಿಸಿ
ಸಹಶಿಕ್ಷಕರಾದ ಚಂದ್ರಶೇಖರ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕರಾದ ಹೇಮಲತಾ, ಮಲ್ಲಿಕಾ, ಹಾಗೂ ಕೀರ್ತಿ ಸಹಕರಿಸಿದರು.