
ನಗರ ಪಂಚಾಯತ್ ಸದಸ್ಯರಾಗಿರುವ ಶರೀಫ್ ಕಂಠಿ ಯವರು ಅವಾಚ್ಯ ಶಬ್ದಗಳಿಂದ ನಿಂಧಿಸಿ ಹಲ್ಲೆ ನಡೆಸಿದ್ದಾರೆಂದು ಮಹಿಳೆಯೊಬ್ಬರು ಸುಳ್ಯ ಠಾಣೆಗೆ ದೂರು ನೀಡಿದ್ದು ಶರೀಫ್ ಕಂಠಿ ವಿರುದ್ಧ ದೂರು ದಾಖಲಾದ ಘಟನೆ ಮಾ.26 ರಂದು ವರದಿಯಾಗಿದೆ.

ಮಾ. 25 ರಂದು ನಾನು ನನ್ನ ಬಾಡಿಗೆ ಮನೆಯಲ್ಲಿ ಇರುವಾಗ ಶರೀಫ್ ಕಂಠಿ ಎಂಬವರು ಕಾರನ್ನು ನನ್ನ ಮನೆಯ ಗೇಟಿಗೆ ಅಡ್ಡಲಾಗಿ ನಿಲ್ಲಿಸಿದರು. ಆಗ ನಾನು ಅವರ ಬಳಿ ನಿಮ್ಮ ಕಾರನ್ನು ಸ್ವಲ್ಪ ಮುಂದಕ್ಕೆ ಇಡಿ ನೀವು ಹೀಗೆ ಇಟ್ಟರೆ ನಾವು ಮನೆಗೆ ಹೇಗೆ ಹೋಗುವುದೆಂದು ತಿಳಿ ಹೇಳಿದೆ. ಅದಕ್ಕೆ ಅವರು ಕಾರಿನಿಂದ ಇಳಿದು ಬಂದು ನನ್ನ ಮೇಲೆ ಕೈಯಿಂದ ಹಲ್ಲೆಯನ್ನು ಮಾಡಿ ನನ್ನ ಬಟ್ಟೆಯನ್ನು ಹರಿದು ಹಾಕಿದ್ದು ಅಲ್ಲದೇ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುತ್ತಾರೆ. ಅಲ್ಲದೇ ನಾನು ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋದಾಗ ನನ್ನನ್ನು ಹಿಂದಿನಿಂದ ಬಂದು ಹಿಡಿದಿರುತ್ತಾರೆ ಎಂದು ನಾವೂರು ನಿವಾಸಿ ಚಂದ್ರಿಕಾ ರವರು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ನ.ಪಂ. ಸದಸ್ಯ ಶರೀಫ್ ಕಂಠಿಯವರನ್ನು ಸಂಪರ್ಕಿಸಿದಾಗ ‘ಚಂದ್ರಿಕಾ ರವರು ಈ ಹಿಂದೆ ಮಗುವಿಗೆ ಸಟ್ಟುಗದಲ್ಲಿ ಸುಟ್ಟು ಗಾಯ ಮಾಡಿದ ಪ್ರಕರಣಕ್ಕೆ ನಾನು ಸಾಕ್ಷಿ ಹೇಳಿದ್ದೇನೆಂದು ಹಳೆ ದ್ವೇಷದಿಂದ ತನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಇದಕ್ಕೆ ಕಾನೂನು ರೀತಿಯಲ್ಲಿ ಹೋರಾಟ ಮಾಡುತ್ತೇನೆ. ಸುಳ್ಳು ಆರೋಪ ಮಾಡುವವರು ಸತ್ಯಪ್ರಮಾಣಕ್ಕೆ ಬರಲಿ” ಎಂದಿದ್ದಾರೆ.