
ಉಬರಡ್ಕದಲ್ಲಿ ಮಾವಿನ ಮಿಡಿ ಕೊಯ್ಯುತ್ತಿದ್ದಾಗ ಗೆಲ್ಲು ತುಂಡಾಗಿ ಬಿದ್ದ ಪರಿಣಾಮ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.
ಜನಾರ್ದನ ಪೂಜಾರಿಯವರು ಮಾ.22ರಂದು ಕೆಲಸಕ್ಕೆ ಹೋಗಿದ್ದರು. ಅಲ್ಲಿ ಮಾವಿನ ಮರವೇರಿ ಮಾವಿನಮಿಡಿ ಕೊಯ್ಯುತ್ತಿದ್ದಾಗ ತಾನು ನಿಂತಿದ್ದ ಗೆಲ್ಲು ತುಂಡಾಗಿ ಕೆಳಕ್ಕೆ ಬಿದ್ದರು. ಪರಿಣಾಮ ಅವರ ಸೊಂಟಕ್ಕೆ ಹಾಗೂ ತಲೆಗೆ ಗಂಭೀರ ಗಾಯಗಳಾಗಿತ್ತು. ತಕ್ಷಣ ಅವರನ್ನು ಸುಳ್ಯ ಆಸ್ಪತ್ರೆಗೆ ಕರೆತಂದು ವೈದ್ಯರ ಸಲಹೆ ಮೇರೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು .ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟರು. ಮೃತರು ತಾಯಿ ಸುಂದರಿ, ಪತ್ನಿ ಉಬರಡ್ಕ ಗ್ರಾ.ಪಂ. ಗ್ರಂಥಾಲಯ ಮೇಲ್ವಿಚಾರಕಿ ಶ್ರೀಮತಿ ಚಿತ್ರಾವತಿ, ಪುತ್ರಿಯಾರಾದ ರಕ್ಷಿತಾ ಹಾಗೂ ಕೀರ್ತಿಕಾ ರನ್ನು ಅಗಲಿದ್ದಾರೆ.
