


ಉಡುಪಿಯ ಶ್ರೀ ಪಂಜುರ್ಲಿ ಪ್ರಸಾದಿತ ಯಕ್ಷಗಾನ ಮಂಡಳಿ ಶಾಸ್ತನ ಮೇಳದವರಿಂದ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಸಭಾಂಗಣದಲ್ಲಿ ಮಾ.24 ರಂದು ದಿ. ದೇವಕಿ ದೇರಪ್ಪಜ್ಜನಮನೆ ಸ್ಮರಣಾರ್ಥ “ಸತ್ಯದ ಸ್ವಾಮಿ ಕೊರಗಜ್ಜ” ಎಂಬ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಆರಂಭದಲ್ಲಿ ನಡೆದ ಚೌಕಿ ಪೂಜೆ ನಡೆಯಿತು. ವಳಲಂಬೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ, ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ಭಕ್ತಾಧಿಗಳು ಸೇರಿದಂತೆ ನೂರಾರು ಯಕ್ಷಗಾನ ಪ್ರೇಮಿಗಳು ವೀಕ್ಷಿಸಿದರು. ವೇಣುಗೋಪಾಲ್ ದೇರಪ್ಪಜ್ಜನಮನೆ ಸ್ವಾಗತಿಸಿ,ವಂದಿಸಿದರು.