
ಇತ್ತೀಚಿನ ಕೆಲವು ದಿನಗಳಿಂದ ವಾತಾವರಣದ ಉಷ್ಣತೆ ಹೆಚ್ಚಾಗುತ್ತಿದ್ದು ಪ್ರಾಣಿ ಪಕ್ಷಿಗಳು ನೀರಿಲ್ಲದೆ ಸಾಯುತ್ತಿವೆ. ಒಂದು ಹನಿ ನೀರಿಗೂ ಪರಿತಪಿಸುವ ಈ ಸಂದರ್ಭದಲ್ಲಿ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಬಾಳಿಲದ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಂದ ಶಾಲಾ ಪರಿಸರದ ಸುತ್ತ ನೀರಿಡುವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಶಾಲಾ ಮುಖ್ಯ ಗುರುಗಳಾದ ಉದಯಕುಮಾರ್ ರೈ ಪ್ರಾಸ್ತಾವಿಕ ಮಾತನಾಡಿದರು. ಶಾಲಾ ಸ್ಕೌಟ್ಸ್ ಶಿಕ್ಷಕರಾದ ಶಿವಪ್ರಸಾದ್ ಜಿ ಕಾರ್ಯಕ್ರಮ ಸಂಘಟಿಸಿದ್ದರು. ಗೈಡ್ಸ್ ಶಿಕ್ಷಕರಾದ ಯಶೋಧಾ ಎನ್ ಹಾಗೂ ಶುಭಾ ಡಿ ವಿದ್ಯಾರ್ಥಿಗಳ ಜೊತೆ ಸಹಕರಿಸಿದರು. ಈ ಸಂದರ್ಭದಲ್ಲಿ ಪೆರುವಾಜೆ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿನಿಯರು ಹಾಜರಿದ್ದು ಸಂಪೂರ್ಣ ಸಹಕಾರ ನೀಡಿದರು.