
ಅರಂತೋಡು – ಎಲಿಮಲೆ ಲೋಕೋಪಯೋಗಿ ರಸ್ತೆಯ ಸಾಮರ್ಥ್ಯಕ್ಕಿಂತ ಹೆಚ್ಚಿನ ಭಾರ ಹೊತ್ತು ಸಾಗುವ ವಾಹನಗಳಿಂದ ರಸ್ತೆಯ ಬಾಳ್ವಿಕೆ ಕಡಿಮೆಯಾಗಿ ಹೊಸದಾಗಿ ನಿರ್ಮಾಣಗೊಂಡ ರಸ್ತೆಗೂ ಹಾನಿಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಅಡ್ತಲೆ ಭಾಗದ ನಾಗರಿಕರು ವಾಹನ ತಡೆದು ಪೋಲೀಸರಿಗೆ ಮಾಹಿತಿ ನೀಡಿದ ಘಟನೆ ಕಳೆದ ರಾತ್ರಿ ನಡೆದಿದೆ.
ಈ ಹಿಂದೆಯೇ ರಸ್ತೆಯ ಧಾರಣಾ ಸಾಮರ್ಥ್ಯಕ್ಕಿಂತ ಅಧಿಕ ಭಾರದ ವಾಹನಗಳನ್ನು ನಿರ್ಬಂಧಿಸಿ ಸೂಚನಾ ಫಲಕ ಅಳವಡಿಸುವ ಬಗ್ಗೆ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಅವರಿಗೆ ಅಡ್ತಲೆ ನಾಗರಿಕ ಹಿತಾರಕ್ಷಣಾ ವೇದಿಕೆಯವರು ಮನವಿ ಮಾಡಿ ಎಚ್ಚರಿಕೆ ನೀಡಿತ್ತು.
ಈ ರಸ್ತೆಯೂ 10 ಟನ್ ಸಾಮರ್ಥ್ಯ ಹೊಂದಿದ್ದು ಮಾ.21 ರಂದು ರಾತ್ರಿ ಲಾರಿಯಲ್ಲಿ ರಬ್ಬರ್ ಮರ ಸಾಗಿತ್ತಿದ್ದು ಸುಮಾರು 35 ಟನ್ ಭಾರ ಹೊಂದಿದ್ದರಿಂದ ನಾಗರಿಕರು ವಾಹನ ತಡೆದು ಪೋಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.