
ವಿದ್ಯಾರ್ಥಿಗಳೇ,
ಪರೀಕ್ಷೆಗಳು ಬರುತ್ತಿವೆ ಇನ್ನೇನು ಹತ್ತಿರ, ಆಗದಿರಿ ನೀವು ಭಯಪಟ್ಟು ತತ್ತರ, ಧೈರ್ಯದಿಂದ ಬರೆಯಿರಿ ಕೇಳಿರುವ ಪ್ರಶ್ನೆಗಳಿಗೆ ಉತ್ತರ…
ನೀವು ವರ್ಷಪೂರ್ತಿ ಓದಿರುವ ಪಾಠಗಳೇ, ಕಲಿತಿರುವ ಪ್ರಶ್ನೆಗಳೇ ಬರುವುದು ಪರೀಕ್ಷೆಯಲ್ಲಿ ಭಯವೇಕೆ ಇನ್ನು, ಮನದೊಳಗಿನ ಭಯಬಿಟ್ಟು ಹಿಡಿದುಕೊಳ್ಳಿರಿ ಪೆನ್ನು…
ಓದುವ ಪಾಠಗಳಲ್ಲಿ ಸಂದೇಹಗಳಿದ್ದರೆ ತೆಗೆದುಕೊಳ್ಳಿರಿ ನಿಮ್ಮ ಶಿಕ್ಷಕರಿಂದ ಮಾರ್ಗದರ್ಶನವನ್ನು, ಪರೀಕ್ಷೆಗೆ ತೆರಳುವ ಮೊದಲು ಪಡೆದುಕೊಳ್ಳಿರಿ ನಿಮ್ಮ ತಂದೆ-ತಾಯಿಯ ಆಶೀರ್ವಾದವನ್ನು…
ಹೆತ್ತವರ ಆಶೀರ್ವಾದದಿಂದ, ಗುರುಗಳ ಮಾರ್ಗದರ್ಶನದಿಂದ ಹಾಗೂ ನಿಮ್ಮೊಳಗಿನ ಆತ್ಮವಿಶ್ವಾಸದಿಂದ ನೀವು ಗೆದ್ದೇ ಗೆಲ್ಲುವಿರಿ ಪರೀಕ್ಷೆ ಎಂಬ ಯುದ್ಧವನ್ನು…✍️ಉಲ್ಲಾಸ್ ಕಜ್ಜೋಡಿ