
ಕುಕ್ಕೆ ಶ್ರೀ ಸುಬ್ರಹ್ಮಣೇಶ್ವರ ಮಹಾವಿದ್ಯಾಲಯ, ಆಂತರಿಕ ಗುಣಮಟ್ಟ ಭರವಸಾ ಕೋಶದ ಸಹಯೋಗದೊಂದಿಗೆ ಅರ್ಥಶಾಸ್ತ್ರ ವಿಭಾಗದಿಂದ 01/03/2025 ರಂದು ಜಾಗತಿಕ ತಾಪಮಾನ ಏರಿಕೆ ಕುರಿತು ಅತಿಥಿ ಉಪನ್ಯಾಸವನ್ನು ಆಯೋಜಿಸಲಾಗಿತ್ತು.
ಖ್ಯಾತ ವನ್ಯಜೀವಿ ಸಂರಕ್ಷಕ ಭುವನೇಶ್ ಕೈಕಂಬ ಅವರು ಸಂಪನ್ಮೂಲ ವ್ಯಕ್ತಿಯಾಗಿ ಅರಣ್ಯನಾಶ, ಪರಿಸರ ಮಾಲಿನ್ಯ ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆ ಮುಂತಾದ ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುವ ಮಾನವ ಚಟುವಟಿಕೆಗಳನ್ನು ಕುರಿತು ಮಾತನಾಡಿದರು
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಶ್ರೀಲತಾ ಕಮಿಲ ಸ್ವಾಗತಿಸಿ, ತೃತೀಯ ಬಿ ಎ ವಿದ್ಯಾರ್ಥಿನಿ ವಿನುತಾ ವಂದಿಸಿದರು.