
ಮಾವಿನಕಟ್ಟೆ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಮಾ.18 ಮತ್ತು 19 ರಂದು ಶ್ರೀ ದೈವದ ಒತ್ತೆಕೋಲ ಮಹೋತ್ಸವ ನಡೆಯಿತು.
ಮಾ.18 ರಂದು ಬೆಳಿಗ್ಗೆ ಗಣಪತಿ ಹವನ , ಶುದ್ಧಿ ಕಲಶ, ಮೇಲೇರಿ ಕಾರ್ಯಕ್ರಮ , ಅಶ್ವತ್ಥ ಪೂಜೆ ಮದ್ಯಾಹ್ನ ಅನ್ನ ಸಂತರ್ಪಣೆ, ರಾತ್ರಿ ಭಂಡಾರ ತೆಗೆಯುವುದು, ಮೇಲೇರಿಗೆ ಅಗ್ನಿ ಸ್ಪರ್ಶ, ಸಾರ್ವಜನಿಕ ಅನ್ನ ಸಂತರ್ಪಣೆ ಹಾಗೂ ಕುಳಿಚಾಟ ನಡೆಯಿತು. ಮಾ 19 ರಂದು ಬೆಳಿಗ್ಗೆ ಕಳಸಾಟಕ್ಕೆ ಹೋಗುವುದು, ದೈವ ಮೇಲೇರಿಗೆ ಪ್ರವೇಶ, ಹರಿಕೆ ಪ್ರಸಾದ ಇತ್ಯಾದಿ ಹಾಗೂ ಮಾರಿಕಳ ಪ್ರವೇಶ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮ – ಮಾ.18 ರಂದು ರಾತ್ರಿ 8:30 ರಿಂದ ಶ್ರೀ ಶಿರಡಿ ಸಾಯಿಬಾಬಾ ಮಂದಿರ ಆಶ್ರಿತ ಸಾಯಿಶಕ್ತಿ ಕಲಾ ಬಳಗ ಉರ್ವ ಚಿಲಿಂಬಿ, ಮಂಗಳೂರು ಇವರಿಂದ ಅದ್ದೂರಿ ತುಳು ಜನಪದ ಶೈಲಿಯ ನಾಟಕ ‘ಜೋಡು ಜೀಟಿಗೆ ‘ ಪ್ರದರ್ಶನಗೊಂಡಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೈವದ ಕೃಪೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ದೈವಸ್ಥಾನದ ಅಧ್ಯಕ್ಷರಾದ ಎ.ವಿ. ತೀರ್ಥರಾಮ ಅಂಬೆಕಲ್ಲು, ಪ್ರ.ಕಾರ್ಯದರ್ಶಿ ರಾಧಾಕೃಷ್ಣ ಶ್ರೀ ಕಟೀಲ್ ಮಾವಿನಕಟ್ಟೆ, ಆಡಳಿತ ಮಂಡಳಿ ಸದಸ್ಯರು, ಶ್ರೀ ವಿಷ್ಣು ಸೇವಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.