Ad Widget

ಅರಂತೋಡು : ಶ್ರೀದುರ್ಗಾ ಗೆಳೆಯರ ಬಳಗ ವತಿಯಿಂದ ಹೊನಲು ಬೆಳಕಿನ ಹಗ್ಗ ಜಗ್ಗಾಟ -ತಂಬುರಾಟಿ ಭಗವತಿ ಅರಂತೋಡು ಪ್ರಥಮ, ಟೀಂ ಮಡಿಮಲೆಮೂಲೆ ದ್ವಿತೀಯ, ವಿಟ್ಲ ಫ್ರೆಂಡ್ಸ್ ತೃತೀಯ, ಬೊಮ್ಮರು ತಂಡ ಚತುರ್ಥ

. . . . . . . . .

ಅರಂತೋಡು ಶ್ರೀ ದುರ್ಗಾ ಗೆಳೆಯರ ಬಳಗ ವತಿಯಿಂದ ಮಹಿಳೆಯರ ಮತ್ತು ಪುರುಷರ ಹೊನಲು ಬೆಳಕಿನ ಹಗ್ಗ ಜಗ್ಗಾಟ ಅರಂತೋಡು ತೋಟಂಪಾಡಿ ಶ್ರೀ ಉಳ್ಳಾಕುಳು ದೈವಸ್ಥಾನ ವಠಾರ ದಲ್ಲಿ ಮಾ.16 ರಂದು ನಡೆಯಿತು.ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ದುರ್ಗಾ ಗೆಳೆಯರ ಬಳಗ ಅಧ್ಯಕ್ಷ ಲಿಖಿನ್ ಕಳುಬೈಲು ವಹಿಸಿದರು.ಪಂದ್ಯಾಟದ ಉದ್ಘಾಟನೆಯನ್ನು ತೋಟಂ ಶ್ರೀ ಉಳ್ಳಾ ಕುಳು ದೈವಸ್ಥಾನ ಅಧ್ಯಕ್ಷ ಕಿಶೋರ್ ಕುಮಾರ್ ಉಳುವಾರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಎಲ್ಲ ಊರಿನ ಆಟಗಾರರು ನಮ್ಮ ಗ್ರಾಮೀಣ ಪ್ರದೇಶದಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಒಂದೇ ಮೈದಾನದಲ್ಲಿ ಪಂದ್ಯಕೂಟ ವನ್ನೂ ನೋಡುವುದಕ್ಕೆ ಶ್ರೀ ದುರ್ಗಾ ಗೆಳೆಯರ ಬಳಗದವರು ಒದಗಿಸಿ ಕೊಟ್ಟಿರುವ ಕಾರ್ಯ ಶ್ಲಾಘನೀಯ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಹಾರೈಸಿದ ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಆಡ್ತಲೆ ಮಾತನಾಡಿ ಈ ಭಾಗದ ಕೆಲಸ ಕಾರ್ಯಗಳಿಗೆ ಮತ್ತು ಸಮಾಜ ಮುಖಿ ಕೆಲಸಗಳಿಗೆ ಗೆಳೆಯರ ಬಳಗದ ಯುವಕರು ನಮ್ಮ ಪಂಚಾಯತ್ ಇರಬಹುದು ಧಾರ್ಮಿಕ ಕ್ಷೇತ್ರ ಇರಬಹುದು ಈ ಎಲ್ಲ ಕಾರ್ಯಗಳಿಗೆ ಕೆಲಸ ಮಾಡುತ್ತಿರುವುದು ಅಭಿನಂದನೀಯ. ನಮ್ಮ ಅರಂತೋಡು ಕ್ಷೇತ್ರದಲ್ಲಿ ಗೆಳೆಯರ ಬಳಗ ಹೆಸರಿನ ಸಂಘಟನೆಯನ್ನು ಮಾಡಿ ಉತ್ತಮ ಕಾರ್ಯನಿರ್ವಹಿಸುತ್ತಿರುವುದು ಸಂತೋಷ ತಂದಿದೆ ಎಂದರು. ವೇದಿಕೆಯಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ ,ನಾರಾಯಣ ಇರ್ನೇ, ಲೋಲಜಾಕ್ಷ ಕಳುಬೈಲು, ಶ್ರಿದುರ್ಗ ಗೆಳೆಯರ ಬಳಗ ಸ್ಥಾಪಕ ಅಧ್ಯಕ್ಷ ವಿನೋದ್ ಕುಮಾರ್ ಹಲಸಿನಡ್ಕ ಊಳುವಾರು, ಕಾರ್ಯದರ್ಶಿ ಹೇಮಂತ್ ಪಾರೆಮಜಲು,ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಅರಂತೋಡು ತೊಡಿಕಾನ ವಿಭಾಗದ 555 ಕೆಜಿ ಪುರುಷರ ಹಗ್ಗ ಜಗ್ಗಾಟ ದಲ್ಲಿ ಪ್ರಥಮ ತೊಡಿಕಾನ ಎ ತಂಡ ,ದ್ವಿತೀಯ ತೊಡಿಕಾನ ಬಿ ತಂಡ ,ತೃತೀಯ ಶ್ರೀ.ಮಲ್ಲಿಕಾರ್ಜುನ ಅರಂತೋಡು,ತಂಡ,ಮತ್ತು ಚತುರ್ಥ ಗೋಲ್ಡನ್ ಹೀಗಲ್ ಅಡ್ಕಬಳೆ ತಂಡ ಪ್ರಶಸ್ತಿ ಯನ್ನು ತನ್ನದಾ ಗಿಸಿಕೊಂಡಿತು.555 ಕೆಜಿ ವಿಭಾಗದ ಹಗ್ಗ ಜಗ್ಗಾಟ ದಲ್ಲಿ ಶ್ರೀ ಭಗವತಿ ತಂಬುರಾಟಿ. ಅರಂತೋಡು, ದ್ವಿತೀಯ ಟೀಂ ಪಡುಮಲೆ ಮೂಲೆ ,ತೃತೀಯ ವಿಟ್ಲ ಫ್ರೆಂಡ್ಸ್ ,ಚತುರ್ಥ ಬೊಮ್ಮಾರು ಫ್ರೆಂಡ್ ಪ್ರಶಸ್ತಿ ಗಳಿಸಿ ಕೊಂಡಿತು . ಮಹಿಳೆಯರ ಹಗ್ಗ ಜಗ್ಗಾಟ ಪಂದ್ಯಾಟದಲ್ಲಿ 7 ತಂಡಗಳು ಭಾಗವಹಿಸಿತು. ಪ್ರಥಮ ಸ್ಥಾನ ಟೀಂ ಕುದುಪಲ್ತಡ್ಕ ದ್ವಿತೀಯ ಸ್ಥಾನವನ್ನು ಟೀಂ ಮಲ್ಲಿಕಾರ್ಜುನ ಅರಂತೋಡು ಏ ಪಡೆದು ಕೊಂಡಿತು,ತೃತೀಯ ಸ್ಥಾನವನ್ನು ಫ್ರೆಂಡ್ಸ್ ಸುಳ್ಯ ಚತುರ್ಥ ಸ್ಥಾನವನ್ನು ಟೀಂ ಮಲ್ಲಿಕಾರ್ಜುನ ಅರಂತೋಡು ಬಿ ಪಡೆದುಕೊಂಡಿತು. ಗೆಳೆಯರ ಬಳಗದ ಸದಸ್ಯ ಮಧುಚಂದ್ರ ಪ್ರಾರ್ಥಿಸಿದರು,ವಿನೋದ್ ಸ್ವಾಗತಿಸಿ ರಾಜ್ಯ ಮಟ್ಟದ ಖ್ಯಾತ ವೀಕ್ಷಕ ವಿವರಣೆಗಾರ ಸುರೇಶ್ ಪಡಿಪಂಡ ಮತ್ತು ಅನುಷ್ ನೆಲ್ಯಾಡಿ ಕಾರ್ಯಕ್ರಮ ನಿರೂಪಿಸಿದರು.ಶ್ರೀ ಗೆಳೆಯರ ಬಳಗದ ಸರ್ವ ಸದಸ್ಯರು ಮತ್ತು ಪದಾಧಿಕಾರಿ ಗಳು ಸಹಕರಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!