
ಅರ್ನಾಡಿಯಲ್ಲಿರುವ ಶಶಾಂಕ್ ರೈಸ್ ಮಿಲ್ ಮಾಲಕ ಅರ್ನಾಡಿ ಸದಾನಂದ ಭಟ್ ಅಲ್ಪ ಕಾಲದ ಅಸೌಖ್ಯದಿಂದ ಇಂದು ಮುಂಜಾನೆ ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು. ಹಲವಾರು ವರ್ಷಗಳಿಂದ ರೈಸ್ ಮಿಲ್ ನಡೆಸುತ್ತಾ ಬಂದಿರುವ ಅವರು ಇತ್ತೀಚೆಗೆ ಬೆಂಗಳೂರಿನ ಮಗನ ಮನೆಯಲ್ಲಿ ನೆಲೆಸಿದ್ದರು.
ಮೃತರು ಪತ್ನಿ ಶಂಕರಿ, ಪುತ್ರ ಶಶಾಂಕ್, ಪುತ್ರಿ ಪ್ರಿಯಾಂಕ, ಸೊಸೆ, ಅಳಿಯ, ಮೊಮ್ಮಕ್ಕಳು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ. ಮೃತರ ಪಾರ್ಥಿವ ಶರೀರ ಮಧ್ಯಾಹ್ನ 2.30 ವೇಳೆಗೆ ಅರ್ನಾಡಿಗೆ ತಲುಪಲಿದೆ.