
ಮಾಣಿ ಮೈಸೂರು ಹೆದ್ದಾರಿಯ ಅರಂತೋಡು ಪೇಟೆಯಲ್ಲಿ ತೊಡಿಕಾನ ತಿರುವು ಸಮೀಪ ಸುಳ್ಯದಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಬೈಕ್ ಮತ್ತು ಮಡಿಕೇರಿ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಬೈಕ್ ಎರಡು ಮುಖಾಮುಖಿ ಢಿಕ್ಕಿಯಾಗಿ ಸವಾರರು ಗಾಯಗೊಂಡ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಓರ್ವ ಸವಾರನ ಕಾಲಿಗೆ ಗಂಭೀರ ಗಾಯಗಳಾಗಿದ್ದು ಮತ್ತೋರ್ವನ ಕಾಲಿನ ಹೆಬ್ಬೆರಳು ತುಂಡಾಗಿದ್ದು ಮೂವರನ್ನು ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿದೆ. ಓರ್ವ ಬೈಕ್ ಸವಾರ ವಿರಾಜಪೇಟೆ ಹಾಗೂ ಇನ್ನಿಬ್ಬರು ಕೌಡಿಚಾರ್ ಮೂಲದವರು ಎಂದು ತಿಳಿದುಬಂದಿದೆ