
ವಿಷಮುಕ್ತ ಗಾಳಿ, ಮಣ್ಣು, ಆಹಾರ, ಪ್ರಕೃತಿ, ಪರಿಸರ ಸಂರಕ್ಷಣೆ, ಪಂಚಗವ್ಯ ಚಿಕಿತ್ಸೆ, ರೋಗಮುಕ್ತ ಭಾರತ, ಸಾಮೂಹಿಕ 1,11,108 ವಿಷ್ಣು ಸಹಸ್ರನಾಮ ಪಾರಾಯಣ, ಒಂದು ಕೋಟಿ ಗೋಮಯ ದೀಪ ಬೆಳಗಿಸುವುದು, ನಂದಿ ಪೂಜೆ, ಗೋಕಥೆ, ಮನೆಮನೆಯಲ್ಲಿ ಗೋವು, ದೇಶಿ ಗೋಮಾತೆಯ ಮಹಿಮೆ ಜನರಿಗೆ ತಿಳಿಸುವುದು, ದೇಶಿ ಗೋಮಾತೆ ಹಾಗೂ ಭೂಮಾತೆಗೆ ಇರುವ ಸಂಬಂಧ ಜನರಿಗೆ ತಿಳಿಸುವುದು, ಗೋಮಾತೆ ವಿಶ್ವಮಾತೆ-ಭಾರತ ವಿಶ್ವಗುರು, ಗೋಮಾತೆಗೆ ರಾಷ್ಟ್ರೀಯ ಮಾನ್ಯತೆ ದೊರೆಯುವಂತಾಗಲು, ಸಹಜ ಕೃಷಿ ವಿಸ್ತರಣೆ, ಸ್ವದೇಶಿ/ಗವ್ಯ ಉತ್ಪನ್ನ ಬಳಕೆಯ ಪ್ರಚಾರ, ಮಣ್ಣು ಉಳಿಸುವ ನಂದಿ ಕೃಷಿಕರ ಸಂಖ್ಯೆ ಹೆಚ್ಚಿಸುವುದು. ದೇಶೀಯ ಸಂರಕ್ಷಣೆ, ಧರ್ಮ ಜಾಗೃತಿ, ಸಾಮಾಜಿಕ ಸಾಮರಸ್ಯ, ಗ್ರಾಮ ವಿಕಾಸ, ಭಾರತೀಯ ಕುಟುಂಬ ಪದ್ಧತಿ ಸಂರಕ್ಷಣೆ, ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸುವುದು, ಉದ್ಯೋಗ ಸೃಷ್ಟಿ, ಋುಣಮುಕ್ತ ಭಾರತ, ಸಮೃದ್ಧ ಭಾರತ, ವಿಶ್ವಗುರು ಭಾರತ ಎನ್ನುವ ಉದ್ದೇಶದೊಂದಿಗೆ ಗೋಸೇವಾ ಗತಿವಿಧಿ ಕರ್ನಾಟಕ, ರಾಧಸುರಭಿ ಗೋಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್(ರಿ.) ವತಿಯಿಂದ ಕರ್ನಾಟಕ ರಾಜ್ಯದಾದ್ಯಂತ ಹೊರಟ “ನಂದಿ ರಥಯಾತ್ರೆ” ಯು ಮಾ.14 ರಂದು ಸುಬ್ರಹ್ಮಣ್ಯಕ್ಕೆ ಪುರಪ್ರವೇಶ ಮಾಡಿತು.
ಸುಬ್ರಹ್ಮಣ್ಯದ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಗಳು ಕಾಶಿಕಟ್ಟೆಯ ಶ್ರೀ ಮಹಾಗಣಪತಿ ದೇವಸ್ಥಾನದ ಮುಂಭಾಗದಲ್ಲಿ ರಥಕ್ಕೆ ಸ್ವಾಗತ ಕೋರಿ ಆಶೀರ್ವಚನ ನೀಡಿದರು.
ನಂತರ ಕಾಶಿಕಟ್ಟೆಯಿಂದ ಪೂರ್ಣಕುಂಭ ಹಾಗೂ ಕುಣಿತ ಭಜನೆಯ ಶೋಭಾಯಾತ್ರೆಯೊಂದಿಗೆ ರಥಬೀದಿಗೆ ಪುರಪ್ರವೇಶ ನಡೆದು ನಂತರ ಗಣ್ಯರ ಉಪಸ್ಥಿತಿಯೊಂದಿಗೆ ರಥಬೀದಿಯಲ್ಲಿ ಧಾರ್ಮಿಕ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಸಂಚಾಲಕರಾದ ಕಿಶೋರ್ ಶಿರಾಡಿ, ಗೌರವಾಧ್ಯಕ್ಷರಾದ ಯಜ್ಞೇಶ್ ಆಚಾರ್, ಅಧ್ಯಕ್ಷರಾದ ಜಯಪ್ರಕಾಶ್ ಕೂಜುಗೋಡು, ವೆಂಕಟ್ ವಳಲಂಬೆ, ಕಾರ್ಯದರ್ಶಿ ದಿನೇಶ್ ಸಂಪ್ಯಾಡಿ, ಖಜಾಂಜಿ ಅಶೋಕ್ ಕುಮಾರ್.ಎಂ.ಬಿ, ಆಚ್ಚುತ ಗೌಡ, ದುಗ್ಗಪ್ಪ ಅಗ್ರಹಾರ, ವನಜಾ.ವಿ ಭಟ್, ಸುಭಾಷಿಣಿ ಶಿವರಾಮ್, ಶೋಭಾ ಗಿರಿಧರ್, ಶ್ರೀಕುಮಾರ್ ಬಿಲದ್ವಾರ, ಮನೋಜ್ ಸುಬ್ರಹ್ಮಣ್ಯ, ಭರತ್ ನೆಕ್ರಾಜೆ, ಗಿರಿಧರ ಸ್ಕಂದ, ವಾಡ್ಯಪ್ಪ ಗೌಡ, ಲಕ್ಷ್ಮೀಶ ಇಜಿನಡ್ಕ, ಗಿರೀಶ್ ಆಚಾರ್ಯ, ಚಂದ್ರಹಾಸ ಶಿವಾಲ, ಭುಕ್ಷಿತ್, ವೆಂಕಟೇಶ್.ಹೆಚ್.ಎಲ್, ಸುಜಾತ, ಭಾರತಿ ದಿನೇಶ್, ಸುಧಾಕರ್ ಶಿರಾಡಿ, ಚಿದಾನಂದ, ಸಂತೋಷ್ ಅಡ್ಡೋಳಿ, ರಾಜೇಶ್ ಕಡಂಪಾಳ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.(ವರದಿ : ಉಲ್ಲಾಸ್ ಕಜ್ಜೋಡಿ)