
ಇತಿಹಾಸ ಪ್ರಸಿದ್ಧ ಕಂದ್ರಪ್ಪಾಡಿ ಶ್ರೀ ರಾಜ್ಯದೈವ ಮತ್ತು ಪುರುಷ ದೈವ ದೈವಸ್ಥಾನಲ್ಲಿ ನಡೆಯುವ ಜಾತ್ರೋತ್ಸವ ವಿಜ್ರಂಭಣೆಯಿಂದ ನಡೆಯಿತು.
ಮಾ.14 ರಂದು ಮುಂಡೋಡಿ ತರವಾಡು ಮನೆಯಿಂದ ಮತ್ತು ಶ್ರೀ ರುದ್ರಚಾಮುಂಡಿ ದೈವಸ್ಥಾನದಿಂದ ದೈವದ ಭಂಡಾರ ಆಗಮನ, ಉಗ್ರಾಣ ತುಂಬಿಸುವ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆ ನಡೆಯಿತು. ತಳೂರು ಹಾಗೂ ಮಾಳಿಗೆಯಿಂದ ಪಲ್ಲಕ್ಕಿ ಉತ್ಸವದೊಂದಿಗೆ ದೈವಗಳ ಭಂಡಾರ ತರುವ ಕಾರ್ಯಕ್ರಮ ನಡೆಯಿತು.
ಮಾ. 15 ರಂದು ಪ್ರಾತಃಕಾಲ ಶ್ರೀ ರಾಜ್ಯದೈವದ ನೇಮ, ಬೆಳಿಗ್ಗೆ ಶ್ರೀ ರುದ್ರಚಾಮುಂಡಿ ದೈವದ ನೇಮ, ಶ್ರೀ ಪುರುಷ ದೈವದ ನೇಮ , ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಾಳಿಕಾ ಪ್ರಸಾದ್ ಮುಂಡೋಡಿ, ಸದಸ್ಯರಾದ ಸೋಮಶೇಖರ ಕೇವಳ, ಶ್ರೀಮತಿ ಗೀತಾ ತಿಮ್ಮಪ್ಪ ಕಡ್ಯ, ಜಯರಾಮ ಕಡ್ಲಾರ್, ಶ್ರೀಮತಿ ಜಾನಕಿ ಚಿದಾನಂದ ಪೇರಳಕಜೆ, ಯಂ. ಆರ್. ಪುರುಷೋತ್ತಮ ಮುಂಡೋಡಿ, ಅಜಯ್ ವಾಲ್ತಾಜೆ, ಕರುಣಾಕರ ದೇವರಗುಂಡ, ಶೂರಪ್ಪ ದೇವ, ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ ಹಾಗೂ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು.
ಅಪರಾಹ್ನ ಶ್ರೀ ಪಂಜುರ್ಲಿ ದೈವದ ನೇಮ ನಡೆದು ಸಂಜೆ ಧ್ವಜವರೋಹಣದೊಂದಿಗೆ ಜಾತ್ರೋತ್ಸವ ಸಂಪನ್ನಗೊಳ್ಳಲಿದೆ.
ಮಾ. 14 ಶುಕ್ರವಾರದಂದು ಕಂದ್ರಪ್ಪಾಡಿ ಅಂಗನವಾಡಿ, ಶಾಲಾ ಮಕ್ಕಳಿಂದ ಮತ್ತು ಊರವರಿಂದ ಸಾಂಸ್ಕೃತಿಕ ವೈಭವ, ಕೆ.ಎಸ್.ಎಸ್. ಕಾಲೇಜು ಸುಬ್ರಹ್ಮಣ್ಯ ಇದರ ಸಾಂಸ್ಕೃತಿಕ ತಂಡದ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ, ಗಾನ ಕೋಗಿಲೆ ರಚನಾ ಚಿದ್ಗಲ್ಲು ಇವರ ಸುಮಧುರ ಕಂಠಸಿರಿಯ ಭಾಗವತಿಗೆಯಲ್ಲಿ “ಯಕ್ಷತರಂಗ” ಪ್ರಸ್ತುತ ಪಡಿಸುವ”ಶ್ರೀ ಕೃಷ್ಣ ಲೀಲಾಮೃತ” ಕನ್ನಡ ಪೌರಾಣಿಕ ಯಕ್ಷಗಾನ ಪ್ರದರ್ಶನಗೊಂಡಿತು.