
ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ದೈವಂಕಟ್ಟು ಮಹೋತ್ಸವವು ಮಾ 15,16,17 ಹಾಗೂ 18 ರಂದು ವಿಜ್ರಂಭಣೆಯಿಂದ ನಡೆಯಲಿದೆ. ಮಾ.15 ರಂದು ಬೆ.10 ರಿಂದ ಹಸಿರುವಾಣಿ ಮೆರವಣಿಗೆ , ಕಲವರ ನಿರಕ್ಕಲ್ (ಉಗ್ರಾಣ ತುಂಬುವುದು), ರಾ.7.00 ರಿಂದ ಶ್ರೀ ವಿಷ್ಣುಮೂರ್ತಿ ಸಪರಿವಾರ ದೈವಗಳಿಗೆ ಕೂಡುವುದು, ಶ್ರೀ ಕೊರ್ತಿಯಮ್ಮನ ಕೋಲಗಳು, ಶ್ರೀ ಪೊಟ್ಟನ್ ದೈವದ ಕೋಲ ನಡೆಯಲಿದೆ.
ಮಾ. 16 ರಂದು ಬೆ.9.00 ರಿಂದ ಶ್ರೀ ವಿಷ್ಣುಮೂರ್ತಿ ದೈವ, ಶ್ರೀ ಚಾಮುಂಡಿಯಮ್ಮ, ಶ್ರೀ ಗುಳಿಗದೈವ , ಸಂಜೆ 6.00 ರಿಂದ ಕೈವೀದ್ ನಂತರ ಶ್ರೀ ವಯನಾಟ್ ಕುಲವನ್ ಹಾಗೂ ಸಪರಿವಾರ ದೈವಗಳಿಗೆ ಕೂಡುವುದು ನಡೆಯಲಿದೆ.
ಮಾ 17 ರಂದು ಅಪರಾಹ್ನ 2.00 ರಿಂದ ಶ್ರೀ ಕಾರ್ನವನ್ ದೈವದ ವೆಳ್ಳಾಟಂ, ಶ್ರೀ ಕೋರಚ್ಚನ್ ದೈವದ ವೆಳ್ಳಾಟಂ, 7.00 ರಿಂದ ಶ್ರೀ ಕಂಡನಾರ್ ಕೇಳನ್ ದೈವದ ವೆಳ್ಳಾಟಂ ನಂತರ ಬಪ್ಪಿಡಲ್, ರಾತ್ರಿ 11.00 ರಿಂದ ಶ್ರೀ ವಿಷ್ಣುಮೂರ್ತಿ ದೈವದ ಕೂಡುವುದು. ಶ್ರೀ ವಯನಾಟ್ ಕುಲವನ್ ದೈವದ ವೆಳ್ಳಾಟಂ ನಡೆಯಲಿದೆ.
ಮಾ.18 ರಂದು ಬೆ.9.00 ರಿಂದ ಶ್ರೀ ಕಾರ್ನವನ್ ದೈವ, ಶ್ರೀ ಕೊರಚ್ಚನ್ ದೈವ, ಶ್ರೀ ಕಂಡನಾರ್ ಕೇಳನ್ ದೈವ , ಸಂಜೆ 4.00 ರಿಂದ ಶ್ರೀ ವಯನಾಟ್ ಕುಲವನ್ ದೈವ ಸೂಟೆ ಸಮರ್ಪಣೆ, ಸಂಜೆ 5.00 ರಿಂದ ಶ್ರೀ ವಿಷ್ಣುಮೂರ್ತಿ ದೈವ, ರಾತ್ರಿ 1.00 ರಿಂದ ಮರ ಪಿಳರ್ಕಲ್ ನಂತರ ಕೈವೀದ್ ದೈವಗಳ ಕೋಲ ನಡೆಯಲಿದೆ ಎಂದು ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಪಿ.ಬಿ ಸುಧಾಕರ ರೈ ತಿಳಿಸಿದ್ದಾರೆ.