Ad Widget

ಸುಬ್ರಹ್ಮಣ್ಯ : ಮಾ.14 ರಂದು ಸುಬ್ರಹ್ಮಣ್ಯಕ್ಕೆ ಪುರಪ್ರವೇಶ ಮಾಡಲಿರುವ “ನಂದಿ ರಥಯಾತ್ರೆ” – ಪೂರ್ವಭಾವಿ ಸಭೆ

. . . . . . . . .

ಗೋಸೇವಾ ಗತಿವಿಧಿ ಕರ್ನಾಟಕ, ರಾಧಸುರಭಿ ಗೋಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್(ರಿ.) ವತಿಯಿಂದ ಕರ್ನಾಟಕ ರಾಜ್ಯದಾದ್ಯಂತ ಹೊರಟ “ನಂದಿ ರಥಯಾತ್ರೆ” ಯು ಮಾ.14 ಶುಕ್ರವಾರದಂದು ಸಂಜೆ 4:30 ಕ್ಕೆ ಸುಬ್ರಹ್ಮಣ್ಯಕ್ಕೆ ಪುರಪ್ರವೇಶ ಮಾಡಲಿದ್ದು, ಸಂಜೆ 4:45 ರಿಂದ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಸಂಪುಟ ನರಸಿಂಹ ಸ್ವಾಮಿ ಮಠ ಸುಬ್ರಹ್ಮಣ್ಯ ಇವರಿಂದ ಕಾಶಿಕಟ್ಟೆ ಶ್ರೀ ಮಹಾಗಣಪತಿ ದೇವಸ್ಥಾನದ ಮುಂಭಾಗದಲ್ಲಿ ಸ್ವಾಗತ ಮತ್ತು ಆಶೀರ್ವಚನ ನೆರವೇರಲಿದ್ದು, ಸಂಜೆ 5:15 ರಿಂದ ಕಾಶಿಕಟ್ಟೆಯಿಂದ ಪೂರ್ಣಕುಂಭ ಮತ್ತು ಕುಣಿತ ಭಜನೆಯ ಶೋಭಾಯಾತ್ರೆಯೊಂದಿಗೆ ರಥಬೀದಿಗೆ ಪುರಪ್ರವೇಶ ನಡೆದು ನಂತರ ಗಣ್ಯರ ಉಪಸ್ಥಿತಿಯೊಂದಿಗೆ ರಥಬೀದಿಯಲ್ಲಿ ಧಾರ್ಮಿಕ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮ ನೆರವೇರಲಿದ್ದು, ಇದರ ಪೂರ್ವಭಾವಿ ಸಭೆಯು ಮಾ.11 ರಂದು ಸುಬ್ರಹ್ಮಣ್ಯದ ಸೊಸೈಟಿ ಸಭಾಂಗಣದಲ್ಲಿ ನಡೆಯಿತು.

ವಿಷಮುಕ್ತ ಗಾಳಿ, ಮಣ್ಣು, ಆಹಾರ, ಪ್ರಕೃತಿ, ಪರಿಸರ ಸಂರಕ್ಷಣೆ, ಪಂಚಗವ್ಯ ಚಿಕಿತ್ಸೆ, ರೋಗಮುಕ್ತ ಭಾರತ, ಸಾಮೂಹಿಕ 1,11,108 ವಿಷ್ಣು ಸಹಸ್ರನಾಮ ಪಾರಾಯಣ, ಒಂದು ಕೋಟಿ ಗೋಮಯ ದೀಪ ಬೆಳಗಿಸುವುದು, ನಂದಿ ಪೂಜೆ, ಗೋಕಥೆ, ಮನೆಮನೆಯಲ್ಲಿ ಗೋವು, ದೇಶಿ ಗೋಮಾತೆಯ ಮಹಿಮೆ ಜನರಿಗೆ ತಿಳಿಸುವುದು, ದೇಶಿ ಗೋಮಾತೆ ಹಾಗೂ ಭೂಮಾತೆಗೆ ಇರುವ ಸಂಬಂಧ ಜನರಿಗೆ ತಿಳಿಸುವುದು, ಗೋಮಾತೆ ವಿಶ್ವಮಾತೆ-ಭಾರತ ವಿಶ್ವಗುರು, ಗೋಮಾತೆಗೆ ರಾಷ್ಟ್ರೀಯ ಮಾನ್ಯತೆ ದೊರೆಯುವಂತಾಗಲು, ಸಹಜ ಕೃಷಿ ವಿಸ್ತರಣೆ, ಸ್ವದೇಶಿ/ಗವ್ಯ ಉತ್ಪನ್ನ ಬಳಕೆಯ ಪ್ರಚಾರ, ಮಣ್ಣು ಉಳಿಸುವ ನಂದಿ ಕೃಷಿಕರ ಸಂಖ್ಯೆ ಹೆಚ್ಚಿಸುವುದು. ದೇಶೀಯ ಸಂರಕ್ಷಣೆ, ಧರ್ಮ ಜಾಗೃತಿ, ಸಾಮಾಜಿಕ ಸಾಮರಸ್ಯ, ಗ್ರಾಮ ವಿಕಾಸ, ಭಾರತೀಯ ಕುಟುಂಬ ಪದ್ಧತಿ ಸಂರಕ್ಷಣೆ, ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸುವುದು, ಉದ್ಯೋಗ ಸೃಷ್ಟಿ, ಋುಣಮುಕ್ತ ಭಾರತ, ಸಮೃದ್ಧ ಭಾರತ, ವಿಶ್ವಗುರು ಭಾರತ ಎನ್ನುವ ಉದ್ದೇಶದೊಂದಿಗೆ ಈ ನಂದಿಯಾತ್ರೆ ಸಾಗಲಿದೆ.
ಪೂರ್ವಭಾವಿ ಸಭೆಯಲ್ಲಿ ಸಂಚಾಲಕರಾದ ಕಿಶೋರ್ ಶಿರಾಡಿ, ಗೌರವಾಧ್ಯಕ್ಷರಾದ ಯಜ್ಞೇಶ್ ಆಚಾರ್, ಅಧ್ಯಕ್ಷರಾದ ಜಯಪ್ರಕಾಶ್ ಕೂಜುಗೋಡು, ಕಾರ್ಯದರ್ಶಿ ದಿನೇಶ್ ಸಂಪ್ಯಾಡಿ, ಖಜಾಂಜಿ ಅಶೋಕ್ ಕುಮಾರ್.ಎಂ.ಬಿ, ಅಚ್ಯುತ ಗೌಡ, ದುಗ್ಗಪ್ಪ ಅಗ್ರಹಾರ, ವನಜಾ.ವಿ ಭಟ್, ಸುಭಾಷಿಣಿ ಶಿವರಾಮ್, ಶೋಭಾ ಗಿರಿಧರ್, ಶ್ರೀಕುಮಾರ್ ಬಿಲದ್ವಾರ, ಮನೋಜ್ ಸುಬ್ರಹ್ಮಣ್ಯ, ಭರತ್ ನೆಕ್ರಾಜೆ, ಸುಧಾಕರ ಶಿರಾಡಿ, ಸಂತೋಷ್ ಅಡ್ಡೋಳಿ, ಚಿದಾನಂದ ದೇವಿಪಾಳ್, ಮುರಳೀಧರ, ರಾಜೇಶ್ ಕಡಂಪಾಳ ಉಪಸ್ಥಿತರಿದ್ದರು.
ಮಾ.14 ರಂದು ಆಗಮಿಸಲಿರುವ “ನಂದಿ ರಥಯಾತ್ರೆ” ಗೆ ಬೆಳಿಗ್ಗೆ 10:00 ಗಂಟೆಗೆ ಗುಂಡ್ಯ ದಲ್ಲಿ, ಬೆಳಿಗ್ಗೆ 11:00 ಗಂಟೆಗೆ ಹೊಸಮಜಲು, ಮದ್ಯಾಹ್ನ 12:00 ಗಂಟೆಗೆ ಬಲ್ಯ ಉಮಾಮಹೇಶ್ವರಿ ದೇವಸ್ಥಾನದಲ್ಲಿ, ಮದ್ಯಾಹ್ನ 1:30 ಕ್ಕೆ ಕಡಬದಲ್ಲಿ, ಮದ್ಯಾಹ್ನ 2:00 ಗಂಟೆಗೆ ಮರ್ದಾಳದಲ್ಲಿ, ಮದ್ಯಾಹ್ನ 3:00 ಗಂಟೆಗೆ ಬಿಳಿನೆಲೆ ಯಲ್ಲಿ, ಮದ್ಯಾಹ್ನ 3:30 ಕ್ಕೆ ಕೈಕಂಬ ದಲ್ಲಿ, ಸಂಜೆ 4:00 ಗಂಟೆಗೆ ಕುಲ್ಕುಂದ ದಲ್ಲಿ ಹಾಗೂ ಸಂಜೆ 4:30 ಕ್ಕೆ ಸುಬ್ರಹ್ಮಣ್ಯ ದಲ್ಲಿ ಸ್ವಾಗತ ನಡೆಯಲಿದೆ ಎಂದು ಸಮಿತಿಯವರು ತಿಳಿಸಿದ್ದಾರೆ.(ವರದಿ : ಉಲ್ಲಾಸ್ ಕಜ್ಜೋಡಿ)

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!