

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸುಳ್ಯ ಶಾಖೆಯ ಕಾರ್ಯದರ್ಶಿಯಾದ ಪೃಥ್ವಿ ಕುಮಾರ್.ಟಿ ರವರು ನಿಯೋಜನೆ ಮೇಲೆ ಶಿಕ್ಷಣ ಇಲಾಖೆಯ ಆಯುಕ್ತಾಲಯ ಬೆಂಗಳೂರು ಇಲ್ಲಿಗೆ ಕರ್ತವ್ಯಕ್ಕೆ ಹಾಜರಾಗಿರುವ ಹಿನ್ನೆಲೆಯಲ್ಲಿ ತೆರವಾದ ಸಂಘದ ಕಾರ್ಯದರ್ಶಿ ಹುದ್ದೆಗೆ ಸಂಘದ ಹಿರಿಯ ಪದಾಧಿಕಾರಿಗಳು ಹಾಗೂ ಪ್ರಸ್ತುತ ಉಪಾಧ್ಯಕ್ಷರಾಗಿರುವ ಶ್ರೀಮತಿ ಪ್ರಮೀಳಾ.ಟಿ ರವರನ್ನು 2024-29 ನೇ ಸಾಲಿನ ಅವಧಿಗೆ ಸಂಘದ ನೂತನ ಕಾರ್ಯದರ್ಶಿಯಾಗಿ ಸಂಘದ ಅಧ್ಯಕ್ಷರಾದ ಡಾ| ನಿತಿನ್ ಪ್ರಭು.ಕೆ ಇವರು ಆಯ್ಕೆ ಮಾಡಿರುತ್ತಾರೆ.(ವರದಿ : ಉಲ್ಲಾಸ್ ಕಜ್ಜೋಡಿ)