
ಸ್ವರ ಸಂಗಮ ಕಲಾವೃಂದ (ರಿ) ಅಕ್ಕಮಹಾದೇವಿ ಸಭಾಂಗಣ ಕನ್ನಡ ಸಾಹಿತ್ಯ ಪರಿಷತ್ತು ಚಾಮರಾಜನಗರ ಬೆಂಗಳೂರು ಇಲ್ಲಿ ನಡೆದ ಸಂಗೀತ ಸಾಹಿತ್ಯ ಸಮಾಜಸೇವೆ ಇನ್ನಿತರ ಹಲವಾರು ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಚಲನಚಿತ್ರದ , ಹಾಗೂ ಕಲಾವಿದ ಶಶಿಧರ ಕೋಟೆ ನಟರಾದ ಅಡಿಗೋಡಿ ಶ್ರೀನಿವಾಸ, ಶ್ರೀಮತಿ ಭಾಗ್ಯಶ್ರೀ ಹಾಗೂ ಸಂಚಾಲಕರಾದ ರೆಹಮಾನ್ ಸಾಹೇಬ್ರು ಬೆಂಗಳೂರು ಮತ್ತಿತರರು ಉಪಸ್ಥಿತರಿದ್ದರು. ಇಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಗಾಯಕ ವಿಜಯಕುಮಾರ್ ಅವರಿಗೆ ಕರ್ನಾಟಕ ಕಲಾ ರತ್ನ ಪ್ರಶಸ್ತಿ 2025 ನೀಡಿ ಗೌರವಿಸಲಾಯಿತು. ಇವರು ಹಲವಾರು ಸಂಗೀತ ಕಾರ್ಯಕ್ರಮ ಮತ್ತು ಫೇಸ್ಬುಕ್ ಲೈವ್ ಗಳಲ್ಲಿ ಹಾಗೂ ಮನರಂಜಿಸಿದ್ದಾರೆ. ಪ್ರಸ್ತುತ ಟಿ.ಎ.ಪಿ.ಸಿ.ಎಂ.ಎಸ್ ಸಿಬ್ಬಂದಿಯಾಗಿರುವ ಇವರು ಸುಳ್ಯ ಕನ್ನಡ ಸಾಹಿತ್ಯ ಪರಿಷತ್ ನ ನಿರ್ದೇಶಕರಾಗಿದ್ದಾರೆ.