Ad Widget

ಕಾಯರ್ತೋಡಿ ಸೂರ್ತಿಲ ಶ್ರೀ ನಿಧಿ ಮಹಿಳಾ ಮಂಡಳದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

. . . . . . . . .

ಶ್ರೀನಿಧಿ ಮಹಿಳಾ ಮಂಡಳಾ (ರಿ) ಕಾಯರ್ತೋಡಿ,ಸೂರ್ತಿಲ ಇದರ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ಮಾ.9 ರಂದು
ಶ್ರೀ ನಿಧಿ ಮಹಿಳಾ ಮಂಡಲದ ಸಭಾಂಗಣದಲ್ಲಿ ನಡೆಸಲಾಯಿತು.

ಮುಖ್ಯ ಅತಿಥಿಗಳಾಗಿ ಶ್ರೀಮತಿ ಮಧುಮತಿ ಬೊಳ್ಳೂರು,ಜತೆ ಕಾರ್ಯದರ್ಶಿ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಒಕ್ಕೂಟ ಮತ್ತು ಅಧ್ಯಕ್ಷರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಸುಳ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಇವರು ಮಹಿಳೆಯರು ಯಾವ ರೀತಿ ಒಂದು ಸಂಘ ಸಂಸ್ಥೆಗಳನ್ನು ನಡೆಸಿಕೊಂಡು ಬರಬೇಕು, ಆರೋಗ್ಯಕರ ಚರ್ಚೆಗಳೊಂದಿಗೆ ಸಂಸ್ಥೆಯನ್ನು ಮುನ್ನಡೆಸಬೇಕು ಎಂಬುದರ ಬಗ್ಗೆ ಉತ್ತಮ ರೀತಿಯ ಮಾತುಗಳಾಡಿ ಮಹಿಳೆಯರನ್ನು ಪ್ರೋತ್ಸಾಹಿಸಿದರು.ಕಾರ್ಯಕ್ರಮದ ಇನ್ನೋರ್ವ ಅತಿಥಿಯಾಗಿ ಶ್ರೀ ರಕ್ತೇಶ್ವರಿ ಸೇವಾ ಸಮಿತಿಯ ಸದಸ್ಯರು ತೀರ್ಥರಾಮ ಕಾಯರ್ತೋಡಿ ಭಾಗವಹಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಕಲಾವತಿ ತೀರ್ಥರಾಮ, ಶ್ರೀನಿಧಿ ಮಹಿಳಾ ಮಂಡಲ ಇವರು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಕಾಯರ್ತೋಡಿ ಸೂರ್ತಿಲ ಅಂಗನವಾಡಿಯ ಸಹಾಯಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಮಹಿಳಾ ಮಂಡಲದ ಸದಸ್ಯರಾದ ಶ್ರೀಮತಿ ಲೀಲಾವತಿ ಜೆ ಶೆಟ್ಟಿ ಇವರಿಗೆ ಮಹಿಳಾಮಂಡಳದ ವತಿಯಿಂದ ಗೌರವ ಸನ್ಮಾನವನ್ನು ಅತಿಥಿಗಳ ಮೂಲಕ ಮಾಡಲಾಯಿತು ಇವರು ಬಗ್ಗೆ ಕಿರು ಪರಿಚಯವನ್ನು ಶ್ರೀಮತಿ ಹೇಮಾವತಿ ವೇಣುಗೋಪಾಲ್ ರವರು ಮಾಡಿದರು.

ಮಹಿಳಾ ದಿನಾಚರಣೆಯ ಪ್ರಯುಕ್ತ ಶ್ರೀನಿಧಿ ಮಹಿಳಾ ಮಂಡಳದ ಸದಸ್ಯರಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ನಡೆಸಿ ಬಹುಮಾನವನ್ನು ವಿತರಿಸಲಾಯಿತು. ಬಹುಮಾನದ ವಿವರವನ್ನು ಕ್ರೀಡಾ ಕಾರ್ಯದರ್ಶಿಯಾದ ಶ್ರೀಮತಿ ಲತಾ ರಾಧಾಕೃಷ್ಣರವರು ಮಾಡಿದರು. ರಶ್ಮಿ ಉಪೇಂದ್ರ ,ಅರ್ಪಿತ ಅನಿಲ್, ರತ್ನ ವೆಂಕಟೇಶ್ ಪ್ರಾರ್ಥಿಸಿದರು.ಸ್ವಾಗತವನ್ನು ಉಪಾಧ್ಯಕ್ಷರು ಶಾರದ ಜಯರಾಮ ನೇರವೇರಿಸಿದರು.ಕಾರ್ಯದರ್ಶಿ ಜ್ಯೋತಿ ಹರೀಶ್ ವಂದನಾರ್ಪಣೆ ಮಾಡಿದರುಯ. ಪ್ರಿಯಾ ಬಳ್ಳಡ್ಕ ಕಾರ್ಯಕ್ರಮ ನಿರೂಪಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!