
ಸುಳ್ಯದ ಜೂನಿಯರ್ ಕಾಲೇಜು ರಸ್ತೆಯ ತಾಲೂಕು ಪಂಚಾಯತ್ ಕಟ್ಟಡ ವಾಣಿಜ್ಯ ಸಂಕೀರ್ಣದಲ್ಲಿ ನೂತನ ಆಡಳಿತದೊಂದಿಗೆ ಗೋಪಿನಾಥ ನೀರಬಸಿರಿ ಕುತ್ಯಾಳ ಇವರ ಮಾಲಕತ್ವದ ಭಗವತಿ ಪ್ರಾವಿಷನ್ ಮತ್ತು ಜನರಲ್ ಸ್ಟೋರ್ ಮಾ. 2ರಂದು ಶುಭಾರಂಭಗೊಂಡಿತು.
ಶ್ರೀವರ ಭಟ್ ಗಣಪತಿ ಹವನ ನೆರವೇರಿಸಿದರು.ಉದ್ಘಾಟನೆಯನ್ನು ಶ್ರೀ ಕಿನ್ನಿಮಾಣಿ ಪೂಮಾಣಿ ದೈವಸ್ಥಾನದ ಮೊಕ್ತೇಸರರಾದ ಬಾಲಕೃಷ್ಣ ಗೌಡ ನಡುಬೆಟ್ಟು ನೆರವೇರಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ರುಕ್ಕಯ್ಯ ಗೌಡ ಸುತ್ತುಕೋಟೆ, ರಂಜಿತ್ ಕುಕ್ಕೆಟ್ಟಿ, ಹರಿಶ್ಚಂದ್ರ ಗೌಡ ಮತಾವು, ಚಿದಾನಂದ ಗೋಪಾಲಕಜೆ, ಧನಂಜಯ ಗೌಡ ಕಾಯಾರ, ಸುಳ್ಯ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕಿ ಶರ್ಮಿಳಾ, ದಿನೇಶ್ ಹುಲಿಮನೆ, ಶ್ರೀಮತಿ ವೇದಾವತಿ ನೀರಬಸಿರಿ ಕುತ್ಯಾಳ, ಕು. ಕ್ಷಮಾ, ಕು. ಶ್ರೀಗೌರಿ, ಶಿವರಾಮ ಕುದ್ದಾಜೆ, ವಿಜಯಕುಮಾರ್ ಕೋಡ್ತಿಲು, ನಂದರಾಜ್ ಸಂಕೇಶ, ದೇವಪ್ಪ ಗೌಡ ಸೂರ್ತಿಲ, ಶ್ರೀಮತಿ ಚಂದ್ರಾವತಿ ಸೂರ್ತಿಲ, ವೆಂಕಟ್ರಮಣ ಕುದ್ದಾಜೆ, ಚಂದ್ರಶೇಖರ ಅಡ್ಡಂಗಾಯ, ತೀರ್ಥರಾಮ ನಡುಮನೆ ಮತ್ತಿತರರು ಉಪಸ್ಥಿತರಿದ್ದರು.
ಗೋಪಿನಾಥ ನೀರಬಸಿರಿ ಕುತ್ಯಾಳ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಗಟು ಮತ್ತು ಚಿಲ್ಲರೆ ವ್ಯಾಪಾರದ ಭಗವತಿ ಪ್ರಾವಿಷನ್ ಮತ್ತು ಜನರಲ್ ಸ್ಟೋರ್‌ನಲ್ಲಿ ದಿನಸಿ ವಸ್ತುಗಳಾದ ಅಕ್ಕಿ, ಬೇಳೆ, ದವಸ ಧಾನ್ಯ ಚಾ ಹುಡಿ, ಸಕ್ಕರೆ, ಬೆಲ್ಲ ಪರಿಶುದ್ಧ ಎಣ್ಣೆ ಹಾಗೂ ಇತರ ಸಾಮಾಗ್ರಿಗಳು, ತರಕಾರಿ, ಹಣ್ಣು ಹಂಪಲು, ಹಾಲು, ಮೊಸರು, ಲಸ್ಸಿ, ತುಪ್ಪ, ಜ್ಯೂಸ್, ಐಸ್ ಕ್ರೀಂ, ಸ್ವೀಟ್ಸ್ ಡ್ರೈಫೋಟ್ಸ್ ಚಾಕೊಲೇಟ್ಸ್ ನ್ಯೂಸ್ ಪೇಪರ್ ಇತ್ಯಾದಿ ದಿನ ಬಳಕೆಯ ವಸ್ತುಗಳು ಲಭ್ಯವಿರಲಿದೆ.
ಮದುವೆ ಸಮಾರಂಭ, ಪೂಜೆಗಳು, ಹಬ್ಬಗಳು, ಹಾಸ್ಟೆಲ್ ಮತ್ತು ಪಿ.ಜಿ.ಗಳಿಗೆ ವಿಶೇಷ ರಿಯಾಯಿತಿ ದರದಲ್ಲಿ ಗುಣಮಟ್ಟದ ವಸ್ತುಗಳನ್ನು ಪೂರೈಕೆ ಮಾಡಲಾಗುವುದು ಗುಣಮಟ್ಟ, ಮಿತವ್ಯಯ ಮತ್ತು ಉತ್ತಮ ಸೇವೆ ನೀಡುವುದೇ ನಮ್ಮ ಧ್ಯೇಯ ಎಂದು ಭಗವತಿ ಸ್ಟೋರ್‌ನ ಮಾಲಕರಾದ ಗೋಪಿನಾಥ್ ನೀರಬಸಿರಿ ಕುತ್ಯಾಳ ಅವರು ತಿಳಿಸಿದ್ದಾರೆ.