
ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಮಾ.02 ರಿಂದ 04 ರವರೆಗೆ ಶ್ರೀ ಮಹಾವಿಷ್ಣುಮೂರ್ತಿ ದೈವದ 56ನೇ ವರ್ಷದ ಒತ್ತೆಕೋಲ ಹಾಗೂ ಶ್ರೀ ಕೊರತಿಯಮ್ಮ ದೈವದ 10ನೇ ವರ್ಷದ ನೇಮೋತ್ಸವವು ನಡೆಯಿತು.
ಮಾ.02 ರಂದು ಬೆಳಿಗ್ಗೆ ಗಣಪತಿ ಹೋಮ, ರಾತ್ರಿ ಶ್ರೀ ಕೊರತಿಯಮ್ಮ ದೈವದ ನಡಾವಳಿ ಹಾಗೂ ಅನ್ನಸಂತರ್ಪಣೆ ನಡೆಯಿತು.
ಮಾ.03 ರಂದು ಸಂಜೆ ಭಂಡಾರ ಹೊರಡುವುದು, ಮೇಲೇರಿಗೆ ಅಗ್ನಿ ಸ್ಪರ್ಶ ಹಾಗೂ ರಾತ್ರಿ ಅನ್ನಸಂತರ್ಪಣೆ ನಡೆದು ಕುಲ್ಚಾಟ ದೈವದ ನಡಾವಳಿ ನಡೆಯಿತು.
ಮಾ.04 ರಂದು ಪ್ರಾತಃಕಾಲ ಕಳಸಾಟ, ಶ್ರೀ ಮಹಾವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶ, ಬೆಳಿಗ್ಗೆ ಮಾರಿಕಳ ಹಾಗೂ ಗಂಧ-ಪ್ರಸಾದ ವಿತರಣೆ ನಡೆದು ನಂತರ ಗುಳಿಗ ದೈವದ ನಡಾವಳಿ ನಡೆಯಿತು.
ಹಾಗೂ ಮಾ.03 ರಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆದಿದ್ದು, ರಾತ್ರಿ ಕುಲ್ಕುಂದ ಪರಿಸರದ ಮಕ್ಕಳಿಂದ “ನೃತ್ಯ ವೈವಿಧ್ಯ” ಹಾಗೂ ನಂತರ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ, ಮೂಲ್ಕಿ ಇವರಿಂದ “ಬಂಟನ ಬಲಿ ಸುತ್ತು” ಯಕ್ಷಗಾನ ಪ್ರಸಂಗ ನಡೆಯಿತು.
ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ರವೀಂದ್ರ ಕುಮಾರ್ ರುದ್ರಪಾದ, ಆಡಳಿತ ಮಂಡಳಿಯ ಸದಸ್ಯರು ಹಾಗೂ ಊರಿನ ಜನರು, ಭಕ್ತಾದಿಗಳು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.(ವರದಿ : ಉಲ್ಲಾಸ್ ಕಜ್ಜೋಡಿ)