
ಮಾರ್ಚ್ 3 ರಿಂದ 7 ರ ತನಕ ತಮಿಳುನಾಡಿನ ಪೆರಿಯಾರ್ ವಿಶ್ವವಿದ್ಯಾಲಯ, ಸೇಲಂ ನಲ್ಲಿ ನಡೆಯಲಿರುವ ದಕ್ಷಿಣ ವಲಯ ಮಟ್ಟದ ಅಂತರ್ ವಿಶ್ವ ವಿದ್ಯಾಲಯಗಳ ಹ್ಯಾಂಡ್ ಬಾಲ್ ಪಂದ್ಯಾವಳಿಗೆ ಕರ್ನಾಟಕ ರಾಜ್ಯದ ವಿಶ್ವೇಶರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ ಮಹಿಳಾ ತಂಡದ ಪರವಾಗಿ ಸಹ್ಯಾದ್ರಿ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿನಿ ಸುಳ್ಯ ಕಾರ್ಯಾತೋಡಿ ಮೂಲದ ಭೂಮಿಕಾ ಆಯ್ಕೆಯಾಗಿರುತ್ತಾರೆ. ಇವರು ತಾಂತ್ರಿಕ ಪದವಿಯಲ್ಲಿ 6ನೇ ಸೆಮಿಸ್ಟರ್
ವಿದ್ಯಾರ್ಥಿನಿಯಾಗಿದ್ದು, ವೇಣುಗೋಪಾಲ್ ಕೊಲ್ಟಾರ್ ಹಾಗೂ ಹೇಮಾವತಿ ದಂಪತಿಯ ಪುತ್ರಿ.