
ಕರ್ನಾಟಕ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಮಡಿಕೇರಿ, ಕರ್ನಾಟಕ ಸರ್ಕಾರ ಇದರ ವತಿಯಿಂದ 2022-23ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಹಾಗೂ ಸಂಶೋಧನಾ ಪ್ರಬಂಧ ಮತ್ತು ಕೃತಿಗಳ ಬಿಡುಗಡೆ ಕಾರ್ಯಕ್ರಮವು ಫೆ.28 ರಂದು ಮಡಿಕೇರಿಯ ಕೊಡಗು ಗೌಡ ಸಮಾಜದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಪರಿಶಿಷ್ಟ ಪಂಗಡದವರಿಗೆ ನೀಡುವ ವಾದ್ಯ ಪರಿಕರಗಳನ್ನು ದೈವ ನರ್ತಕರಾದ ಕೊಲ್ಲಮೊಗ್ರು ಗ್ರಾಮದ ಬೆಂಡೋಡಿಯ ಬೊಳಿಯ ಅಜಿಲ ಹಾಗೂ ಅವರ ತಂಡದವರಿಗೆ ಅರೆಭಾಷೆ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ವಿತರಿಸಲಾಯಿತು. ವಾದ್ಯ ಪರಿಕರಗಳನ್ನು ಮಂಜೂರು ಮಾಡುವಲ್ಲಿ ಅಕಾಡೆಮಿಯ ಮಾಜಿ ಸದಸ್ಯರಾದ ದಿನೇಶ್ ಹಾಲೆಮಜಲು ಸಹಕರಿಸಿದ್ದಾರೆ.