
ಉಬರಡ್ಕ ಮಿತ್ತೂರು ಗ್ರಾಮದ ಶ್ರೀ ನರಸಿಂಹ ಶಾಸ್ತಾವು ದೇವಸ್ಥಾನದಲ್ಲಿ ಮಾ.04 ರಿಂದ 06 ರವರೆಗೆ ವರ್ಷಾವಧಿ ಜಾತ್ರೋತ್ಸವವು ನಡೆಯಲಿದೆ.
ಮಾ.04 ರಂದು ಬೆಳಿಗ್ಗೆ 8:00 ಗಂಟೆಗೆ ತೋರಣ ಮುಹೂರ್ತ ಮತ್ತು ಉಗ್ರಾಣ ಪೂಜೆ, ಬೆ.9:00ಗಂಟೆಯಿಂದ ಹಸಿರುವಾಣಿ ಸಮರ್ಪಣೆ ನಡೆಯಲಿದೆ.
ನಂತರ ಬೆಳಿಗ್ಗೆ 9:30ರಿಂದ ಶ್ರೀ ಬೆಳರಂಪಾಡಿ ವನಶಾಸ್ತಾವು ಕ್ಷೇತ್ರದಲ್ಲಿ ಸಾನಿಧ್ಯ ಕಲಶ ಮತ್ತು ಪಂಚಗವ್ಯ, ವಿಶೇಷ ಪೂಜೆ, ಶ್ರೀ ಶಾಸ್ತಾವು ಕ್ಷೇತ್ರದ ನಾಗನ ಕಟ್ಟೆ ಮತ್ತು ಬೆಟ್ಟತೋಟದ ಚಿತ್ರಕೂಟದಲ್ಲಿ ಸಾನಿಧ್ಯ ಕಲಶ, ಪಂಚಗವ್ಯ ಮತ್ತು ತಂಬಿಲ ಸೇವೆ ನಡೆಯಲಿದೆ.
ಮಾ.05 ರಂದು ಮಧ್ಯಾಹ್ನ 12:30ಕ್ಕೆ ಮಹಾಪೂಜೆ, ಅನ್ನಪ್ರಸಾದ ವಿತರಣೆ ನಡೆಯಲಿದೆ. ಸಂಜೆ 6:30ಕ್ಕೆ ದೀಪಾರಾಧನೆ, ಸಂಜೆ 7:30ರಿಂದ ಸಾಮೂಹಿಕ ಪ್ರಾರ್ಥನೆ, ವಿವಿಧ ವೈದಿಕ ಕಾರ್ಯಕ್ರಮಗಳು, ಶ್ರೀ ಶಿವ ಸಾನಿಧ್ಯ ಮತ್ತು ಶ್ರೀ ನರಸಿಂಹ ಸಾನಿಧ್ಯ ಕಟ್ಟೆಗಳಲ್ಲಿ ಮಂಡಲ ಬರೆದು ಶಿವ ಪೂಜೆ ಮತ್ತು ನರಸಿಂಹ ದೇವರ ಪೂಜೆ, ಶ್ರೀ ದೇವಾಲಯದಲ್ಲಿ ರಾತ್ರಿ ಪೂಜೆ ನಡೆಯಲಿದೆ.
ಮಾ.06 ರಂದು ಬೆಳಿಗ್ಗೆ ಶ್ರೀ ಗಣಪತಿ ಹವನ, ಸಾನಿಧ್ಯ ಕಲಶ, ಸಾನಿಧ್ಯ ಕಲಶಾಭಿಷೇಕ, ಪೂ.10:30ರಿಂದ ಮಹಾಪೂಜೆ, ಶ್ರೀ ದೇವರ ಭೂತ ಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಅನ್ನಪ್ರಸಾದ, ರಾತ್ರಿ 7:30ರಿಂದ ಅಲಂಕಾರ ಪೂಜೆ ಮತ್ತು ರಂಗಪೂಜೆ, ರಾತ್ರಿ 8:30ರಿಂದ ಶ್ರೀ ರಕೇಶ್ವರಿ ದೈವದ ಸಾನಿಧ್ಯದಲ್ಲಿ ದೇವಕ್ರಿಯೆಯಲ್ಲಿ ಕೋಲ ನಡಾವಳಿ ನಡೆಯಲಿದೆ.
ಅದೇ ರೀತಿ ಜಾತ್ರೋತ್ಸವದ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆಯಲಿದ್ದು,
ಮಾ.04 ರಂದು ಸಂಜೆ 6:00 ಗಂಟೆಯಿಂದ ಊರಿನ ಅಂಗನವಾಡಿ ಮತ್ತು ಶಾಲಾ ಮಕ್ಕಳಿಂದ ಹಾಗೂ ಗ್ರಾಮದ ಭಕ್ತಾಭಿಮಾನಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ರಾತ್ರಿ 8:00 ಗಂಟೆಯಿಂದ ಸಭಾ ಕಾರ್ಯಕ್ರಮ ನಡೆಯಲಿದೆ.
ಮಾ.05 ರಂದು ಸಂಜೆ 6:00 ಗಂಟೆಯಿಂದ ಸಾಂಸ್ಕೃತಿಕ ಸಂಭ್ರಮ, ರಾತ್ರಿ 8:00 ಗಂಟೆಯಿಂದ ನೃತ್ಯ-ಗಾನ-ಸಂಗಮ ಝೀ ಕನ್ನಡ, ಕಲರ್ಸ್ ಸೂಪರ್, ಸ್ಟಾರ್ ಪ್ಲಸ್ ಖ್ಯಾತಿಯ ತಂಡದಿಂದ ವೈವಿಧ್ಯಮಯ ನೃತ್ಯ, ಸ್ಟಾರ್ ನೈಟ್‌ನ ನೆಚ್ಚಿನ ಹಾಡುಗಾರರ ಸಮಾಗಮ ನಡೆಯಲಿದೆ ಎಂದು ಜಾತ್ರೋತ್ಸವ ಸಮಿತಿ ಅಧ್ಯಕ್ಷ ಪಿ.ಎಸ್.ಗಂಗಾಧರ ತಿಳಿಸಿದ್ದಾರೆ.