
ಸುಳ್ಯದ ಜೂನಿಯರ್ ಕಾಲೇಜು ರಸ್ತೆಯ ತಾಲೂಕು ಪಂಚಾಯತ್ ವಾಣಿಜ್ಯ ಸಂಕೀರ್ಣದಲ್ಲಿ ನೂತನ ಆಡಳಿತದೊಂದಿಗೆ ಭಗವತಿ ಸ್ಟೋರ್ ಮಾ. ೦2ರಂದು ಶುಭಾರಂಭಗೊಳ್ಳಲಿದೆ.
ಇಲ್ಲಿ ದೊರಕುವ ಸಾಮಾಗ್ರಿಗಳು, ದಿನಸಿ ವಸ್ತುಗಳಾದ ಅಕ್ಕಿ, ಬೇಳೆ, ದವಸ ಧಾನ್ಯ, ಚಾ ಹುಡಿ, ಸಕ್ಕರೆ, ಬೆಲ್ಲ, ಪರಿಶುದ್ಧ ಎಣ್ಣೆ ಹಾಗೂ ಇತರ ಸಾಮಾಗ್ರಿಗಳು, ತರಕಾರಿ, ಹಣ್ಣು ಹಂಪಲು, ಜ್ಯೂಸ್, ಐಸ್ ಕ್ರೀಂ, ಸ್ವೀಟ್ಸ್, ಡ್ರೈ ಫೂಟ್ಸ್, ಚಾಕೊಲೇಟ್ಸ್, ನ್ಯೂಸ್ ಪೇಪರ್ ಇತ್ಯಾದಿ ದಿನ ಬಳಕೆಯ ವಸ್ತುಗಳು ಲಭ್ಯ.
ಮದುವೆ, ಪೂಜೆ ಹಾಗೂ ವಿವಿಧ ಸಮಾರಂಭಗಳಿಗೆ, ಹಾಸ್ಟೆಲ್, ಪಿ.ಜಿ ಯವರಿಗೆ ವಿಶೇಷ ದರ ಕಡಿತ ಮಾಡಲಾಗುವುದು ಎಂದು ಮಾಲಕರಾದ ಗೋಪಿನಾಥ್ ನೀರಬಸಿರಿ ಕುತ್ಯಾಳ ತಿಳಿಸಿದ್ದಾರೆ.
