Ad Widget

ಎಸ್.ಕೆ.ಡಿ.ಆರ್.ಡಿ.ಪಿ. ವತಿಯಿಂದ ಕೇರ್ಪಡ ಮಹಿಷ ಮರ್ದಿನಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ರೂ 5 ಲಕ್ಷ ಧನಸಹಾಯ

. . . . . . . . .

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕೇರ್ಪಡ ಶ್ರೀಮಹಿಷ ಮರ್ದಿನಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜುರಾದ 5,00,000 ಮೊತ್ತದ ಡಿಡಿ ಹಸ್ತಾಂತರ ಮಾಡಲಾಯಿತು.. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ತಾಲೂಕು ಯೋಜನಾಧಿಕಾರಿ ಮಾಧವ ಗೌಡರವರು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನೀಡುವ ಬೇರೆ ಬೇರೆ ಕಾರ್ಯಕ್ರಮಗಳಿಗೆ ನೀಡುವ ಅನುದಾನಗಳ ಬಗ್ಗೆ.. ಯೋಜನೆಯಿಂದ ಸದಸ್ಯರಿಗೆ ಮತ್ತು ಊರಿನ ಜನರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಯೋಜನೆಯ ಕಾರ್ಯ ನಿರ್ವಹಿಸುವ ರೀತಿಯ ಬಗ್ಗೆ ಸದಸ್ಯರಿಗೆ ಮನಮುಟ್ಟುವ ರೀತಿಯಲ್ಲಿ ಮಾಹಿತಿಯನ್ನು ನೀಡಿದರು ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್ ರವರು ಮಾತನಾಡಿ ಗ್ರಾಮಾಭಿವೃದ್ಧಿ ಯೋಜನೆಗೆ ಪೂರಕವಾಗಿ ಯೋಜನೆಯಿಂದ ಸಿಗುವಂತಹ ಸೌಲಭ್ಯಗಳ ಬಗ್ಗೆ ಗ್ರಾಮದ ದೇವಸ್ಥಾನಗಳಿಗೆ ಬಡಜನರ ಕುಟುಂಬದ ಅಭಿವೃದ್ಧಿಗೆ ಪೂರಕವಾಗಿ ಶ್ರೀ ಕ್ಷೇತ್ರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಸದಸ್ಯರಿಗೆ ಮಾಹಿತಿಯನ್ನು ನೀಡಿದುದಲ್ಲದೆ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕುಮಾರಿ ಭಾಗಿರಥಿ ಯವರ ಸಮ್ಮುಖದಲ್ಲಿ ದೇವಸ್ಥಾನ ಆಡಳಿತ ಸಮಿತಿಯ ಅಧ್ಯಕ್ಷರಾದ ವಸಂತ ಗೌಡ ನಡುಬೈಲು ಹಾಗೂ ಕಮಿಟಿಯ ಎಲ್ಲಾ ಸದಸ್ಯರ ಸಮ್ಮುಖದಲ್ಲಿ ಡಿಡಿ ಯನ್ನು ಹಸ್ತಾಂತರಿಸಿದರು.. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಮಾತನಾಡಿ ಶ್ರೀ ಕ್ಷೇತ್ರದಿಂದ ಸಿಕ್ಕಿರುವ ಸೌಲಭ್ಯಗಳ ಬಗ್ಗೆ ಮತ್ತು ಅನುದಾನಗಳಿಂದ ಆದ ಪ್ರಯೋಜನಗಳ ಬಗ್ಗೆ ನೆನಪಿಸುತ್ತ ಹಿಂದಿನಿಂದಲೂ ಕೇರ್ಪಡ ಶ್ರೀ ಮಹೀಶ ಮರ್ದಿನಿ ದೇವಸ್ಥಾನದ ಅಭಿವೃದ್ಧಿಗೆ ಪೂರಕವಾಗಿ ಸಿಕ್ಕಿರುವ ಸೌಲಭ್ಯಗಳ ಬಗ್ಗೆ ಮತ್ತೊಮ್ಮೆ ನೆನಪಿಸುತ್ತ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು . ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕುಮಾರಿ ಭಾಗೀರಥಿಯವರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಘಗಳನ್ನು ಸೂರಪ್ಪ ಗೌಡರವರ ಮನೆಯಲ್ಲಿ ಪ್ರಾರಂಭಿಸಿದ ಸ್ವಸಹಾಯ ಸಂಘಗಳ ನೆನಪುಗಳನ್ನ ನೆನಪು ಹಾಕುತ್ತಾ ಪೂಜ್ಯರು ಆಗಮಿಸಿದ ಸಂದರ್ಭಗಳನ್ನು ನೆನಪಿಸುತ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯಿಂದ ಸಿಕ್ಕಿರುವ ಸೌಲಭ್ಯಗಳ ಬಗ್ಗೆ ಹಾಗೂ ಜನರಿಗೆ ಸದುಪಯೋಗವಾಗುವಂತಹ ಕಾರ್ಯಕ್ರಮಗಳನ್ನ ಅನುಷ್ಠಾನಗೊಳಿಸಿರುವ ಬಗ್ಗೆ ಶಾಸಕರು ಸದಸ್ಯರಿಗೆ ವಿವರಣೆಯನ್ನು ನೀಡುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವಲಯ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ವಿಶ್ವನಾಥ ಗೌಡ ಕಲೆಂಬಿ ನಿಂತಿ ಕಲ್ಲು ವಲಯದ ಒಕ್ಕೂಟಗಳ ವಲಯ ಅಧ್ಯಕ್ಷರಾದ ವಸಂತ ನಿಂತಿಕಲ್ಲು. ಕಾರ್ಯಕ್ರಮದಲ್ಲಿ ದೇವಸ್ಥಾನ ಸಮಿತಿಯ ಆಡಳಿತ ವಿಭಾಗ ಮತ್ತು ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಒಕ್ಕೂಟದ ಪದಾಧಿಕಾರಿಗಳು ಮಾಜಿ ಪದಾಧಿಕಾರಿಗಳು ಹಾಜರಿದ್ದರು. ಕೇರ್ಪಡ ಶ್ರೀ ಮಹೀಶ ಮರ್ದಿನಿ ದೇವಸ್ಥಾನ ಕಮಿಟಿಯ ಕೋಶಾಧಿಕಾರಿ ವೆಂಕಪ್ಪಗೌಡ ಅಲಾಜೇ ಸೇರಿರುವ ಎಲ್ಲರನ್ನೂ ಸ್ವಾಗತಿಸಿ ವಲಯ ಮೇಲ್ವಿಚಾರಕರದ ಶ್ರೀಮತಿ ಹೇಮಲತಾ ರವರ ವಂದಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!