
ಸ್ನೇಹಶ್ರೀ ಮಹಿಳಾ ಮಂಡಲ ಬೆಳ್ಳಾರೆ ಆಶ್ರಯದಲ್ಲಿ ಸಂಸ್ಥೆಯ ದಶ ಸಂಭ್ರಮಾಚರಣೆಯ, ದಶ ಕಾರ್ಯಕ್ರಮಗಳ ಅಂಗವಾಗಿ ಚಿಣ್ಣರ ಹಬ್ಬ ಕಾರ್ಯಕ್ರಮ ಬೆಳ್ಳಾರೆ ಅಂಗನವಾಡಿ ಕೇಂದ್ರದಲ್ಲಿ ಫೆ. 24ರಂದು ನಡೆಯಿತು. ಬೆಳ್ಳಾರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರಶೇಖರ ಪನ್ನೆ ಉದ್ಘಾಟಿಸಿ ಮಾತನಾಡಿ ಪುಟಾಣಿಗಳ ಮನಸ್ಸನ್ನು ಅರಳಿಸುವುದೇ ಚಿಣ್ಣರ ಹಬ್ಬ ಕಾರ್ಯಕ್ರಮ ಮುಖ್ಯ ಆಶಯ ವಾಗಲಿ ಎಂದರು. ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆಯ ಮುಖ್ಯೋಪಾಧ್ಯಾಯ ಮಾಯಿಲಪ್ಪ ಜಿ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸುಳ್ಯ, ಬೆಳ್ಳಾರೆ ವಲಯ ಮೇಲ್ವಿಚಾರಕರಾದ ಉಷಾ ಪ್ರಸಾದ್ ರೈ, ಬೆಳ್ಳಾರೆ ಅಂಗನವಾಡಿ ಕೇಂದ್ರದ ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಅಪ್ಸ ಬಿ. ಯು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಸ್ನೇಹಶ್ರೀ ಮಹಿಳಾ ಮಂಡಲ ಅಧ್ಯಕ್ಷೆ ಪೂರ್ಣಿಮಾ ಪಡ್ಪು ಅಧ್ಯಕ್ಷತೆ ವಹಿಸಿದ್ದರು. ಸ್ನೇಹಶ್ರೀ ಮಹಿಳಾ ಮಂಡಲ ಜತೆ ಕಾರ್ಯದರ್ಶಿ ಶೋಭನಾ ಪನ್ನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುಟಾಣಿಗಳಿಗೆ ವಿವಿಧ ಮನೋರಂಜನಾ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ನೀಡಿ ಪ್ರೋತ್ಸಾಯಿಸಲಾಯಿತು. ಸ್ನೇಹಶ್ರೀ ಮಹಿಳಾ ಮಂಡಲ ಉಪಾಧ್ಯಕ್ಷೆ ಪೂರ್ಣಿಮಾ ಪೆರುವಾಜೆ ಸ್ವಾಗತಿಸಿ, ಅಂಗನವಾಡಿ ಕಾರ್ಯಕರ್ತೆ ಭಾರತಿ ಕೆ ವಂದಿಸಿದರು, ಸ್ನೇಹಶ್ರೀ ಮಹಿಳಾ ಮಂಡಲ ಕೋಶಾಧಿಕಾರಿ ಕುಸುಮಾ ಕುರುoಬುಡೇಲು ಕಾರ್ಯಕ್ರಮ ನಿರೂಪಿಸಿದರು.