
ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಫೆ.23 ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ತಂಡ 12 ಸ್ಥಾನ ಪಡೆದು ಭರ್ಜರಿ ಗೆಲುವು ದಾಖಲಿಸಿದ್ದು ಕಾಂಗ್ರೆಸ್ ಬೆಂಬಲಿತ ಸಹಕಾರ ಭಾರತ ತಂಡ,ಹಾಗೂ ಪಕ್ಷೇತರರು ಸೋಲು ಕಂಡಿದ್ದಾರೆ.
ಸಹಕಾರ ಭಾರತಿ ಅಭ್ಯರ್ಥಿಯಾಗಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ ಹಾಲಿ ಅಧ್ಯಕ್ಷ ವೆಂಕಟ್ ದಂಬೆಕೋಡಿ 1090, ಮಾಜಿ ಅಧ್ಯಕ್ಷ ಮುಳಿಯ ಕೇಶವ ಭಟ್ 1025, ಜಯಪ್ರಕಾಶ್ ಮೊಗ್ರ 792, ನವೀನ್ ಬಾಳುಗೋಡು 874, ರವೀಂದ್ರ ಅಡ್ಡನಪಾರೆ 654, ಪದ್ಮನಾಭ ಮೀನಾಜೆ 710, ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೃಷ್ಣಯ್ಯ ಮೂಲೆತೋಟ 827, ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ವಿನ್ಯಾಸ್ ಕೊಚ್ಚಿ 1054, ಮಹಿಳಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ತಿಲಕ ಕೊಲ್ಯ 974, ವಿನುತಾ ಪ್ರಶಾಂತ್ ಜಾಕೆ 920,
ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜನಾರ್ಧನ ಅಚ್ರಪ್ಪಾಡಿ 969, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕುಂಞ ಬಳ್ಳಕ 994 ಮತ ಪಡೆದು ಗೆಲುವು ಕಂಡಿದ್ದಾರೆ.
ರೈತ ಸಹಕಾರ ಭಾರತ ತಂಡದಿಂದ ಸಾಮಾನ್ಯ ಕ್ಷೇತ್ರಕ್ಕೆ ಸನತ್ ಮುಳುಗಾಡು 479, ಪ್ರವೀಣ್ ಮುಂಡೋಡಿ 596, ಸುಧಾಕರ ಮಲ್ಕಜೆ 303, ಜಯಾನಂದ ಪಟ್ಟೆ 270, ಗಿರೀಶ್ ಪಡ್ಡಂಬೈಲು 406, ದಿನೇಶ್ ಹಾಲೆಮಜಲು 329, ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಕರುಣಾಕರ ಹೊಸಹಳ್ಳಿ 595, ಹಿಂದುಳಿದ ಬಿ ಕ್ಷೇತ್ರದಿಂದ ಮಧುಕಿರಣ ಪೂಜಾರಿಕೋಡಿ 384, ಮಹಿಳಾ ಕ್ಷೇತ್ರದಿಂದ ಶಶಿಕಲಾ ದೇರಪಜ್ಜನ ಮನೆ 521, ರತ್ನಾವತಿ ಹುಲ್ಲುಕುಮೇರಿ 453, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಪುರುಷೋತ್ತಮ ಅಡ್ಡನಪಾರೆ 479, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಬಾಲಪ್ಪ ಬಳ್ಳಕ್ಕ 442 ಸ್ಪರ್ಧಿಸಿ ಸೋಲು ಕಂಡರು.
ಪಕ್ಷೇತರರಾಗಿ ಸಾಮಾನ್ಯ ಸ್ಥಾನದಿಂದ ಗೋಪಾಲಕೃಷ್ಣ ಪುರ್ಲುಮಕ್ಕಿ 181, ದಾಮೋದರ ತುಪ್ಪದಮನೆ 257 ರಾಜಗೋಪಾಲ ಅಂಬೆಕಲ್ಲು 163 ಮತ ಪಡೆದು ಸೋಲು ಕಂಡರು.
ಶೇ 78% ಮತದಾನವಾಗಿದ್ದು, ಒಟ್ಟು 1899 ಮತದಾರರಿದ್ದು 1484 ಮತದಾನ ನಡೆದಿದೆ. ಸಾಮಾನ್ಯ ಕ್ಷೇತ್ರದಲ್ಲಿ 70, ಮಹಿಳಾ ಕ್ಷೇತ್ರದಲ್ಲಿ 24, ಹಿಂದುಳಿದ ಎ ಕ್ಷೇತ್ರದಲ್ಲಿ 62, ಹಿಂದುಳಿದ ವರ್ಗ ಬಿ ಕ್ಷೇತ್ರದಲ್ಲಿ 43, ಎಸ್.ಟಿ. ಕ್ಷೇತ್ರದಲ್ಲಿ 36,ಎಸ್.ಸಿ. ಕ್ಷೇತ್ರದಲ್ಲಿ 48 ಅಸಿಂಧು ಮತಗಳು ದಾಖಲಾಗಿದೆ.