
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, v4 ನ್ಯೂಸ್ ಮತ್ತು ಎಂ.ಬಿ ಫೌಂಡೇಶನ್ ಸಹಯೋಗದಲ್ಲಿ ನಡೆಸಿದ ಅರೆ ಭಾಷೆ ಕಾಮಿಡಿ ಸೀಸನ್ 1 ಆಡಿಶನ್ ಶೋ ದಲ್ಲಿ ಕೆ. ಎಸ್ .ಎಸ್ ಕಾಲೇಜಿನ ತಂಡ ಆಯ್ಕೆಯಾಗಿದೆ. ಸಂಸ್ಥೆಯ ಪ್ರಾಂಶುಪಾಲ ಡಾ ದಿನೇಶ ಪಿ.ಟಿ ಅವರ ಸಹಕಾರದೊಂದಿಗೆ ಕನ್ನಡ ವಿಭಾಗದ ಉಪನ್ಯಾಸಕಿ ಸುಮಿತ್ರ ಅವರ ಮಾರ್ಗದರ್ಶನದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಾದ ವಿಕಾಸ್ ಗೌಡ, ಸಂಖ್ಯಾ, ಮಾನಸ್ ಎಂ ಮತ್ತು ಮೌಲ್ಯ ಪ್ರದರ್ಶನ ನೀಡಿದರು.