
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಸುಳ್ಯ ತಾಲೂಕಿನ ಸುಬ್ರಹ್ಮಣ್ಯ ವಲಯದ ಕಲ್ಮಕಾರು ಗ್ರಾಮದ ಕಿಲಾರ್ಕಜೆ ಎಂಬಲ್ಲಿ ವಾಸ ಮಾಡುತ್ತಿರುವ ರುಕ್ಮಯ್ಯ S/o ರಾಮಪ್ಪ ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ವಾತ್ಸಲ್ಯ ಮನೆ ರಚನೆ ಮಾಡಿ ಹಸ್ತಾಂತರ ಕಾರ್ಯಕ್ರಮ ನೆರವೇರಿತು. ಈ ಸಂದರ್ಭದಲ್ಲಿ ಶ್ರೀ ಅಶ್ವತ್ ಯಾಲದಾಳು ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಕಲ್ಮಕಾರು ಗ್ರಾಮ, ಶ್ರೀ ಡ್ಯಾನಿ ಯಾಲದಾಳು ಯುವಕಮಂಡಲ ಅಧ್ಯಕ್ಷರು, ಶ್ರೀ ಗಣೇಶ್ ಭಟ್ ಇಡ್ಯಡ್ಕ ಪ್ರಗತಿಪರ ಕೃಷಿಕರು, ಶ್ರೀ ಶೇಷಪ್ಪ ಕಲ್ಮಕಾರು ಎ ಒಕ್ಕೂಟದ ಅಧ್ಯಕ್ಷರು, ಶ್ರೀ ರಾಮಣ್ಣ ಕಲ್ಮಕಾರು ಎ ಒಕ್ಕೂಟದ ಅಧ್ಯಕ್ಷರು, ಶ್ರೀ ಹೇಮಂತ್ ಕೊಲ್ಲಮೊಗ್ರ ಬಿ ಒಕ್ಕೂಟದ ಅಧ್ಯಕ್ಷರು, ಶ್ರೀ ರಾಧಾಕೃಷ್ಣ ಸ್ಥಾಪಕಾಧ್ಯಕ್ಷರು, ಶ್ರೀ ಯಶೋಧರ ಬಿ.ಸಿ ಕೃಷಿಕರು, ಶ್ರೀ ಆನಂದ ಮೆಂಟೆಕಜೆ ಮಾಜಿ ಅಧ್ಯಕ್ಷರು ,ಶ್ರೀ ತೀರ್ಥರಾಮ ದೋಣಿಪಳ್ಳ ವಲಯಾಧ್ಯಕ್ಷರು ಸುಬ್ರಹ್ಮಣ್ಯ ವಲಯ , ಶ್ರೀ ಮಾಧವ ಗೌಡ ಯೋಜನಾಧಿಕಾರಿಗಳು ,ಶ್ರೀ ಕೃಷ್ಣಪ್ಪ ಗೌಡ ಮೇಲ್ವೀಚಾರಕರು ಸುಬ್ರಹ್ಮಣ್ಯ ವಲಯ, ಶ್ರೀಮತಿ ಲಕ್ಷ್ಮೀ ಜ್ಞಾನವಿಕಾಸ ಸಮನ್ವಯಾಧಿಕಾರಿ, ಶ್ರೀಮತಿ ಸಾವಿತ್ರಿ ಚಿನ್ನಪ್ಪ ಮತ್ತು ಶ್ರೀಮತಿ ಪದ್ಮಾವತಿ ಸೇವಾಪ್ರತಿನಿಧಿಗಳು , ಶ್ರೀ ಸತೀಶ್ ಟಿ ಎನ್ ವಿಪತ್ತು ಘಟಕದ ಸಂಯೋಜಕರು ಹಾಗೂ ವಿಪತ್ತು ಘಟಕದ ಸದಸ್ಯರು ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.