
ಸುಳ್ಯ: ವಲಯ ೧೫ ರ ತರಬೇತಿ ವಿಭಾಗದ ತರಬೇತಿ ಕಾರ್ಯಕ್ರಮ ಪರೀಕ್ಷೆ ಯೊಂದು ಹಬ್ಬ ಬನ್ನಿ ಸಂಭ್ರಮಿಸೋಣ ಎಂಬ ವಿಶೇಷ ಶೀರ್ಷಿಕೆಯಡಿಯಲ್ಲಿ ಜೇಸಿಐ ಸುಳ್ಯ ಪಯಸ್ವಿನಿ,ಚೈತ್ರ ಯುವತಿ ಮಂಡಲ ಅಜ್ಜಾವರ , ಪ್ರತಾಪ ಯುವಕ ಮಂಡಲ ಅಜ್ಜಾವರ ಇವುಗಳ ಜಂಟಿ ಸಹಕಾರದೊಂದಿಗೆ ಸರಕಾರಿ ಪ್ರೌಢಶಾಲೆ ಅಜ್ಜಾವರ ಇಲ್ಲಿ ನಡೆಯಿತು.
ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರವನ್ನು ಪುತ್ತೂರು ವಿವೇಕಾನಂದ ಕಾಲೇಜು ಇದರ ಮ್ಯಾನೇಜಿಂಗ್ ಡೈರೆಕ್ಟ್ ರ್ ಪ್ರಮಿತಾ ಸಿ ಹಾಸ್ ರವರು ನಡೆಸಿಕೊಟ್ಟರು ಈ ಸಂದರ್ಭದಲ್ಲಿ ಜೇಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷರಾದ ಸುರೇಶ್ ಕಾಮತ್,ಯುವತಿ ಮಂಡಲದ ಅಧ್ಯಕ್ಷೆ ಶಶ್ಮಿ ಭಟ್ ಅಜ್ಜಾವರ, ಯುವಕ ಮಂಡಲ ಅಧ್ಯಕ್ಷ ಗುರುರಾಜ್ ಅಜ್ಜಾವರ, ಸರಕಾರಿ ಪ್ರೌಢಶಾಲೆ ಅಜ್ಜಾವರ ಮುಖ್ಯಶಿಕ್ಷಕರಾದ ಗೋಪಿನಾಥ್ ಮೆತ್ತಡ್ಕ,ಶಿಕ್ಷಕಿ ವಿದ್ಯಾಶಂಕರಿ,ಯುವಕ ಮಂಡಲ ಖಜಾಂಜಿ ಲೋಕೇಶ್ ರಾವ್,ಚನಿಯ ಕಲ್ತಡ್ಕ,ಜೇಸಿಐ ಕಾರ್ಯದರ್ಶಿ ಜೇಸಿ ಲತಾಶ್ರೀ ಸುಪ್ರಿತ್ ಮೊಂಟಡ್ಕ, ಜತೆ ಕಾರ್ಯದರ್ಶಿ ಜೇಸಿ ತಾರ ಮಾಧವ ಹಾಗೂ ಶಾಲಾ ಎಸ್.ಡಿ.ಎಂ.ಸಿ ಸದಸ್ಯರು, ಪೋಷಕರು ವಿಧ್ಯಾರ್ಥಿಗಳು ಉಪಸ್ಥಿತಿರಿದ್ದರು.