
ಗುತ್ತಿಗಾರು ಕ್ಲಸ್ಟರ್ ಮಟ್ಟದ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನ “ಕಲಿಕಾ ಹಬ್ಬ 2024-25” ನಿಪುನ್ ಭಾರತ ಪ್ರಾಯೋಜಿತ ಕಾರ್ಯಕ್ರಮವನ್ನು ನಡುಗಲ್ಲು ಸ. ಹಿ.. ಪ್ರಾ. ಶಾಲೆಯಲ್ಲಿ ಫೆ.18 ರಂದು ನಡೆಯಿತು.
ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷರಾದ ಶಿವರಾಮ ಉತ್ರಂಬೆ ವಹಿಸಿದ್ದರು. ಉದ್ಘಾಟನೆಯನ್ನು ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮಿತ್ರ ಮೂಕಮಲೆ ನೆರವೇರಿಸಿ ಶುಭಹಾರೈಸಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಭಾರತಿ ಸಾಲ್ತಾಡಿ, ಸದಸ್ಯರುಗಳಾದ ವಿಜಯಕುಮಾರ್ ಚಾರ್ಮಾತ, ಹರೀಶ್ ಕೊಯಿಲ, ಶ್ರೀಮತಿ ಲೀಲಾವತಿ ಅಂಜೇರಿ, ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಶಿಕ್ಷಣ ಸಂಯೋಜಕಿ ಶ್ರೀಮತಿ ಧನಲಕ್ಷ್ಮಿ. ಕೆ., ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶ್ರೀಮತಿ ರಮ್ಯ, ಸಮೂಹ ಸಂಪನ್ಮೂಲ ವ್ಯಕ್ತಿ ಕುಶಾಲಪ್ಪ ತುಂಬತಾಜೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರತಿನಿಧಿ ಕುಶಾಲಪ್ಪ ಪಾರಪ್ಪಾಡಿ, ನಡುಗಲ್ಲು ಶಾಲಾ ಮುಖ್ಯೋಪಾಧ್ಯಾಯ ಚಂದ್ರಶೇಖರ ಪಾರೆಪ್ಪಾಡಿ ಉಪಸ್ಥಿತರಿದ್ದರು.
ವೇದಿಕೆಯಲ್ಲಿದ್ದ ಗಣ್ಯರನ್ನು ಶಿಕ್ಷಕರು, ಎಸ್ ಡಿ ಎಂ ಸಿ ಸದಸ್ಯರು, ಬ್ಯಾಡ್ಜ್, ಗುಲಾಬಿ ನೀಡಿ, “ಕಲಿಕಾ ಹಬ್ಬ ” 2025 ರ ಶಿಕ್ಷಕ-ವಿದ್ಯಾರ್ಥಿ ತಯಾರಿತ ಪೇಟ ತೊಡಿಸುವುದರೊಂದಿಗೆ ಗೌರವಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಶೀತಲ್.ಯು.ಕೆ. ಆಗಮಿಸಿ ಕಾರ್ಯಕ್ರಮ ವೀಕ್ಷಿಸಿ ಊರಿನ ಜನತೆ, ಸಂಘಟಕರ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸಮಾರೋಪ ಸಮಾರಂಭದಲ್ಲಿ ವಿಜಯಕುಮಾರ್ ಚಾ ರ್ಮತ, ಹರೀಶ್ ಕೊಯಿಲ , ಕುಶಾಲಪ್ಪ ತುಂಬತ್ತಾಜೆ, ಚಂದ್ರಶೇಖರ ಪಾರೆಪ್ಪಾ ಡಿ, ಶಿವರಾಮ ಉತ್ರಂಬೆ ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ವನಜಾಕ್ಷಿಯವರಿಂದ ಕಾರ್ಯಕ್ರಮ ನಿರ್ವಹಿಸಿದರು. ಮುಖ್ಯಶಿಕ್ಷಕ ಚಂದ್ರಶೇಖರ ಪಾರೆಪ್ಪಾಡಿ ಸ್ವಾಗತಿಸಿ, ಶಿಕ್ಷಕ ಮಹೇಶ್ ವಂದಸಿದರು.