Ad Widget

ಹರಿಹರ ಪಳ್ಳತ್ತಡ್ಕ : ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಜಾತ್ರೋತ್ಸವ – ಇಂದು ಹಸಿರು ಕಾಣಿಕೆ ಸಮರ್ಪಣೆ

. . . . . . . . .

ಹರಿಹರ ಪಳ್ಳತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಇಂದಿನಿಂದ ಅಂದರೆ ಫೆ.20 ರಿಂದ 22 ರವರೆಗೆ ಶ್ರೀ ಹರಿಹರೇಶ್ವರ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಜಾತ್ರೋತ್ಸವವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು, ಇಂದು(ಫೆ.20) ಬೆಳಿಗ್ಗೆ 9:00 ಗಂಟೆಗೆ ಹಸಿರು ಕಾಣಿಕೆ, ಮದ್ಯಾಹ್ನ 12:00 ಗಂಟೆಗೆ ಮಹಾಪೂಜೆ, ಮದ್ಯಾಹ್ನ 12:30 ಕ್ಕೆ ಅನ್ನಸಂತರ್ಪಣೆ, ಸಾಯಂಕಾಲ ತಂತ್ರಿಗಳ ಆಗಮನ, ರಾತ್ರಿ 8:00 ಗಂಟೆಗೆ ಮಹಾಪೂಜೆ ಹಾಗೂ ರಾತ್ರಿ 8:15 ರಿಂದ ಅನ್ನಸಂತರ್ಪಣೆ ನಡೆಯಲಿದೆ.
ನಾಳೆ(ಫೆ.21) ಬೆಳಿಗ್ಗೆ 6:00 ರಿಂದ ಗಣಪತಿ ಹವನ, ಕಲಶಪೂಜೆ, ಕಲಶಾಭಿಷೇಕ, ಮದ್ಯಾಹ್ನ 12:00 ಗಂಟೆಗೆ ಮಹಾಪೂಜೆ, ಅನ್ನಸಂತರ್ಪಣೆ, ಸಾಯಂಕಾಲ 6:00 ಗಂಟೆಗೆ ದೀಪಾರಾಧನೆ, ಚೆಂಡೆವಾದನ, ರಾತ್ರಿ 8:00 ಗಂಟೆಗೆ ಮಹಾಪೂಜೆ ಹಾಗೂ ರಾತ್ರಿ 8:00 ರಿಂದ ದೇವರ ಬಲಿ ಉತ್ಸವ ಹೊರಡುವುದು, ವಸಂತಕಟ್ಟೆ ಪೂಜೆ, ಬಟ್ಟಲು ಕಾಣಿಕೆ ಹಾಗೂ ರಾಜಾಂಗಣ ಪ್ರಸಾದ ನಡೆಯಲಿದೆ. ಅದೇ ರೀತಿ ಬೆಳಿಗ್ಗೆ 6:00 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ ವಿವಿಧ ಭಜನಾ ತಂಡಗಳಿಂದ ಅರ್ಧ ಏಕಾಹ ಭಜನೆ ನಡೆಯಲಿದೆ.
ನಾಡಿದ್ದು(ಫೆ.22) ಬೆಳಿಗ್ಗೆ 6:00 ಗಂಟೆಯಿಂದ ಸಾಯಂಕಾಲದ ವರೆಗೆ ಉಳ್ಳಾಗುಲು ಹಾಗೂ ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ.
ಅದೇ ರೀತಿ ಸಭಾ ಕಾರ್ಯಕ್ರಮಗಳೂ ಕೂಡ ನಡೆಯಲಿದ್ದು, ಇಂದು(ಫೆ.20) ಸಂಜೆ 5:00 ರಿಂದ 5:30 ರವರೆಗೆ ಅಂಗನವಾಡಿ ಮಕ್ಕಳಿಂದ ನೃತ್ಯ ಕಾರ್ಯಕ್ರಮ, ಸಂಜೆ 5:30 ರಿಂದ 6:45 ರವರೆಗೆ ಪ್ರಾಥಮಿಕ ಶಾಲಾ ಮಕ್ಕಳಿಂದ ವಿವಿಧ ವಿನೋದಾವಳಿಗಳು, ಸಂಜೆ 6:45 ರಿಂದ 7:45 ರವರೆಗೆ ಹಿರಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ, ರಾತ್ರಿ 7:45 ರಿಂದ 8:00 ರವರೆಗೆ ರಾಷ್ಟ್ರೀಯ ಯೋಗಪಟು ಬೇಬಿ ಹವ್ಯಾಕ್ಷ.ಎಸ್.ಆರ್ ಇವರಿಂದ ಯೋಗ ಪ್ರದರ್ಶನ ನಡೆಯಲಿದೆ. ನಂತರ ರಾತ್ರಿ 8:00 ರಿಂದ 9:00 ರವರೆಗೆ ಶ್ರೀ ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೂಜುಗೋಡು ರವರ ಅಧ್ಯಕ್ಷತೆಯಲ್ಲಿ ವಿವೇಕಾನಂದ ಸ್ವಾಯುತ್ತ ಮಹಾವಿದ್ಯಾಲಯ ಪುತ್ತೂರು ಇದರ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ| ಶ್ರಿಶಕುಮಾರ್.ಎಂ.ಕೆ ಇವರಿಂದ ಧಾರ್ಮಿಕ ಉಪನ್ಯಾಸ ನಡೆಯಲಿದ್ದು, ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು| ಭಾಗೀರಥಿ ಮುರುಳ್ಯ ಹಾಗೂ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಶ್ರೀಮತಿ ಮಲ್ಲಿಕಾ ಪಕ್ಕಳ ಮಲಾರಬೀಡು ಉಪಸ್ಥಿತರಿರಲಿದ್ದಾರೆ. ರಾತ್ರಿ 9:00 ರಿಂದ 10:15 ರವರೆಗೆ ಕೌಸ್ತುಭ ಕಲಾಸೇವಾ ಟ್ರಸ್ಟ್(ರಿ.) ಕೂಜುಗೋಡು ಪ್ರಸ್ತುತಿಪಡಿಸುವ “ಶ್ರೀರಾಮ ದರ್ಶನ” ಮಕ್ಕಳ ಯಕ್ಷಗಾನ ನಡೆಯಲಿದ್ದು, ನಂತರ ರಾತ್ರಿ 10:15 ರಿಂದ 11:15 ರವರೆಗೆ ವಿವಿಧ ಸಂಘ-ಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ನಾಳೆ(ಫೆ.21) ಸಂಜೆ 6:00 ರಿಂದ ಬಾಲಚಂದ್ರ ಪೆರಾಜೆ ಇವರಿಂದ ಸ್ಯಾಕ್ಸೋಫೋನ್ ವಾದನ ನಡೆಯಲಿದ್ದು, ನಂತರ ಸಂಜೆ 6:30 ರಿಂದ 7:30 ರವರೆಗೆ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘ(ರಿ.) ಕಾಸರಗೋಡು ಇವರಿಂದ “ಶ್ರೀದೇವಿ ಮಹಾತ್ಮೆ” ಯಕ್ಷಗಾನ ಗೊಂಬೆಯಾಟ ನಡೆಯಲಿದೆ.
ಅದೇ ರೀತಿ ಫೆ.26 ಶಿವರಾತ್ರಿಯಂದು ಸಂಜೆ 6:00 ರಿಂದ ರಾತ್ರಿ 12:00 ಗಂಟೆಯವರೆಗೆ ಹಳೇಕೋಟೆ ಶ್ರೀ ಮಾರಿಯಮ್ಮ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಬೋಳಾರ, ಮಂಗಳೂರು ಇವರಿಂದ “ತುಳಸಿ ಜಲಂಧರ” ಎಂಬ ಯಕ್ಷಗಾನ ಪ್ರಸಂಗ ನಡೆಯಲಿದೆ.(ವರದಿ : ಉಲ್ಲಾಸ್ ಕಜ್ಜೋಡಿ)

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!