
ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಸೋಶಿಯಲ್ ಸೈನ್ಸ್ ರಿಸರ್ಚ್ ಸದನ ರೀಜನಲ್ ಸೆಂಟರ್ ಹೈದರಾಬಾದ್ ಇವರ ಪ್ರಾಯೋಜಕತ್ವದಲ್ಲಿ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಹಯೋಗದೊಂದಿಗೆ ಅರ್ಥಶಾಸ್ತ್ರ ವಿಭಾಗದಿಂದ ಎರಡು ದಿನದ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ್ ಪಿ ಟಿ ವಹಿಸಿದರು. ಉದ್ಘಾಟಕರಾದ ಉಜಿರೆಯ ರುಡ್
ಸೆಟ್ ಹಿರಿಯ ಶ್ರೇಣಿ ಉಪನ್ಯಾಸಕಿ ಅನಸೂಯ ಶೆಟ್ಟಿ ಅವರು ಮಹಿಳೆ ಹಲವಾರು ಜವಾಬ್ದಾರಿಗಳ ಹೊಣೆಗಾರಿಕೆ ಹೊತ್ತಿರುವುದರಿಂದ ಅವಳು ಒಂದು ಕೌಶಲ್ಯವಾಗಿದ್ದಾಳೆ. ಸಮಾಜದ ಬೆಳವಣಿಗೆಯಲ್ಲಿ ಮಹಿಳೆಯ ಪಾತ್ರ ಅತ್ಯಗತ್ಯವಾಗಿದೆ ಎಂದು ಮಾತನಾಡಿದರು. ಬೆಳ್ತಂಗಡಿ ತಾಲೂಕಿನ ಹಣಕಾಸು ಜ್ಞಾನ ಸಲಹೆಗಾರ ಉಷಾ ಕಾಮತ್ ಅವರು ಮಹಿಳೆಗೆ ಉದ್ಯಮ ನಡೆಸಲು ಇರುವ ಸರಕಾರದ ಯೋಜನೆಗಳ ಬಗ್ಗೆ ತಿಳಿಸಿದರು.ಎನ್‌ಐಟಿಕೆ ಸುರತ್ಕಲ್ ನ
ಮಾನವಶಾಸ್ತ್ರ, ಸಾಮಾಜಿಕ ವಿಜ್ಞಾನ ಮತ್ತು ನಿರ್ವಹಣಾ ಶಾಲೆಯ ಸಹಾಯಕ ಪ್ರಾಧ್ಯಾಪಕ, ಡಾ. ರಾಜೇಶ್ ಆಚಾರ್ಯ ಪ್ರಾಸ್ತಾವಿಕ ನುಡಿದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ ಉಜಿರೆಯ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಗಣರಾಜ್ ಕೆ , ಆಂತರಿಕ ಗುಣಮಟ್ಟ ಭರವಶಾ ಕೋಶದ ಸಂಯೋಜಕಿ ಲತಾ ಬಿ ಟಿ ಉಪಸ್ಥಿತರಿದ್ದರು. ಉದ್ಯಮಶೀಲತೆಯಲ್ಲಿ ಮಹಿಳಾ ಕೌಶಲ್ಯ ಕುರಿತು ವಿವಿಧ ಪ್ರಬಂಧಗಳನ್ನು ಮಂಡಿಸಲಾಯಿತು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಲತಾ ಕಮಿಲ ಸ್ವಾಗತಿಸಿ, ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ ಶಶಿ ವಂದಿಸಿದರು