
ಈ ಹಿಂದೆ ವಿವಿಧ ಕಡೆಗಳಲ್ಲಿ ನೀಡಲಾಗುತ್ತಿದ್ದ ಆಧಾರ್ ತಿದ್ದುಪಡಿ ಸೇವೆಯನ್ನು ಪ್ರಸ್ತುತ ಬೆಳ್ಳಾರೆಯಲ್ಲಿ ಮಾತ್ರವೇ ಸೀಮಿತಗೊಳಿಸಿದೆ. ಇದರಿಂದ ಜನ ಸಂಕಷ್ಟ ಪಡುವಂತಾಗಿದೆ. ಒಂದು ದಿನಕ್ಕೆ ಕೇವಲ 15 ಮಂದಿಗೆ ಮಾತ್ರವೇ ಟೋಕನ್ ನೀಡಲು ಸಾದ್ಯ ಎಂದು ಅಧಿಕಾರಿಗಳ ಪಟ್ಟು ಹಿಡಿದಿದ್ದರಿಂದ ಜನ ಆಕ್ರೋಶ ವ್ಯಕ್ತಪಡಿಸಿದ ಘಟನೆ ಇಂದು ನಡೆದಿದೆ. ಈಗ ಬಂದಿರುವವರಿಗೆ ಮುಂದಿನ ದಿನಾಂಕಗಳ ಟೋಕನ್ ನೀಡಿ ನಾವು ಅಂದು ಬರುತ್ತೇವೆ,ಪ್ರತೀ ದಿನವೂ ಈ ಅಲೆದಾಟ ತಪ್ಪುತ್ತದೆಯಲ್ಲವೇ ಎನ್ನುವ ಬೇಡಿಕೆಯನ್ನು ಜನ ಮುಂದಿಟ್ಟರೂ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಆಡಳಿತ ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಅಂಚೆ ಕಛೇರಿಯ ಸೇರಿರುವ ಜನ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.