
ಸುಳ್ಯ ಪಯಸ್ವಿನಿ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಫೆ.16ರಂದು ಮಧ್ಯಾಹ್ನ ಕೊಳೆತ ಸ್ಥಿತಿಯಲ್ಲಿ ಕಂಡು ಬಂದ ಶವದ ಗುರುತು ಪತ್ತೆಯಾಗಿದ್ದು, ಪಿರಿಯಾಪಟ್ಟಣದ ಅಜಿತ್ (24) ಎಂದು ತಿಳಿದುಬಂದಿದೆ.ಈತ ಸುಳ್ಯದ ವೆಲ್ಕಮ್ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದನೆಂದೂ, ಕೆಲ ತಿಂಗಳ ಹಿಂದೆ ಊರಿಗೆ ಹೋಗಿದ್ದ. ವಾಪಸು ಕೆಲಸಕ್ಕೆ ಬಂದಿರಲಿಲ್ಲ. ಫೆ.16ರಂದು ಪಯಸ್ವಿನಿ ನದಿ ಹರಿಯುವ ಅಂಗಡಿಮಠ ಗೋಳಿಮೂಲೆ ಎಂಬಲ್ಲಿ ಸ್ಥಳೀಯರಾದ ಪುಷ್ಪಲತಾ ಎಂಬವರಿಗೆ ಕೊಳೆತ ಶವ ಕಂಡುಬಂತೆನ್ನಲಾಗಿದೆ. ವಿಷಯ ತಿಳಿದು ಸುಳ್ಯ ಪೋಲೀಸರು ಬಂದರು. ಪರಿಶೀಲನೆ ನಡೆಸಿದಾಗ ದಾಖಲೆ ಇದ್ದುದನ್ನು ಕಂಡು ಪ್ರದೀಪ್ ಪಿರಿಯಾಪಟ್ಟಣ ಆತ ಸುಳ್ಯದ ಹೋಟೆಲ್ ನಲ್ಲಿ ಕೆಲಸಕ್ಕಿದ್ದ ಮಾಹಿತಿ ಲಭಿಸಿತೆಂದು ತಿಳಿದುಬಂದಿದೆ.
ರಫೀಕ್ ಲೈಫ್ ಕೇರ್ ಆಂಬುಲೆನ್ಸ್, ಶಮೀರ್ ಕಾಣಿಯೂರು, ರಫೀಕ್ ಬಿ ಮ್ ಎ ಸಿದ್ದಿಕ್ ಜಟ್ಟಿಪಳ್ಳ ಮೊದಲಾದವರು ಶವ ಮೇಲೆತ್ತಲು ಸಹಕರಿಸಿದರೆಂದು ತಿಳಿದುಬಂದಿದೆ.